Wednesday, July 18, 2012
Tuesday, February 16, 2010
ವಿದ್ಯಾರ್ಥಿಗಳ ಔದಾರ್ಯವೇ ಬಂಡವಾಳ
ಕೆಲವು ದಿನಗಳ ಹಿಂದೆ ಸುಮಾರು ೪೫ ವರ್ಷದ ವ್ಯಕ್ತಿಯೊಬ್ಬ ನಮ್ಮ ಕಾಲೇಜಿಗೆ ಬಂದು ,ತನಗೆ ಕ್ಷಯರೋಗವಿದೆಯೆಂದು (ವೈದ್ಯರು ಬರೆದು ಕೊಟ್ಟಿದ್ದ ಔಷಧಿಯ ಚೀಟಿಯೊಂದನ್ನು ತೋರಿಸಿ )ಹೇಳಿದಾಗ ನಮ್ಮ ಕೈಲಾದಷ್ಟು ಸಹಾಯ ಮಾಡಿದೆವು .ತರಗತಿಗಳಲ್ಲೂ ಬಹಳಷ್ಟು ಹಣ ಸಂಗ್ರಹಣೆ ಮಾಡಿಕೊಂಡು ಆ ವ್ಯಕ್ತಿ ಹೊರಟುಹೋದ .ಇದಾದ ಸುಮಾರು ಒಂದು ವಾರಕ್ಕೆ ಮತ್ತೆ ಅದೇ ವ್ಯಕ್ತಿ ಬೇರೊಂದು ಆಸ್ಪತ್ರೆಯ ವೈದ್ಯರು ಕೊಟ್ಟಿದ್ದ ಔಷಧಿಯ ಚೀಟಿಯನ್ನು ತೋರಿಸುತ್ತ "ನನ್ನ ಹೆಂಡತಿಗೆ ಹೃದಯದ ಖಾಯಿಲೆಯಿದೆ ,ನೀವು ಸಹಾಯ ಮಾಡಬೇಕು "ಎಂದು ಅಂಗಲಾಚಿದ .ನಮಗೆ ಅನುಮಾನ ಬಂತಾದರೂ ದೇಹಿ ಎಂದವರಿಗೆ ನಾಸ್ತಿ ಎಂದು ಹೇಳಬಾರದೆಂದು ಅವನಿಗೆ ಸಹಾಯ ಮಾಡಿದೆವು
ಇದಾದ ೧೫ ದಿನಕ್ಕೆ ಮತ್ತೆ ಅದೇ ವ್ಯಕ್ತಿ ಹಾಜರಾದ !ನನ್ನ ಮಗಳಿಗೆ ಮೂತ್ರಪಿಂಡದ ವ್ಯಫಲ್ಯವಿದೆ ನನಗೆ ಧನ ಸಹಾಯ ಮಾಡಬೇಕು ಎಂದಾಗಿತ್ತು ಅವನ ಈ ಸಲದ ಮನವಿ .
ಎರಡು ಸಲ ಸಹಾಯ ಮಾಡಿದ್ದ ಕೆಲವು ಹುಡುಗರು ಈಗ ಜಾಗೃತರಾದರು .ಅವನಿಗೆ ಬುದ್ದಿ ಹೇಳಲು ಮುಂದಾದಾಗ ಆ ವ್ಯಕ್ತಿಯೇ ಅವಾಚ್ಯವಾಗಿ ಬಯ್ಯಲು ತೊದಗಬೇಕೆ ?
ಕೊನೆಗೆ ಪೊಲೀಸರಿಗೆ ಹಿಡಿದು ಕೊಡುವುದಾಗಿ ಬೆದರಿಸಿದಾಗ ಅವನು ಅಲ್ಲಿಂದ ಪರಾರಿಯಾದ .
ಜನರನ್ನು ಈ ರೀತಿ ಮೋಸ ಮಾಡುವುದೇ ಆ ವ್ಯಕ್ತಿಯ ಕಸುಬಾಗಿರಬಹುದು .ಆದರೆ ಪ್ರತಿಷ್ಟಿತ ಆಸ್ಪತ್ರೆಗಳ ವೈದ್ಯರು ಅದು ಹೇಗೆ ಅವನಿಗೆ ಬೇರೆ ಬೇರೆ ಕಾಯಿಲೆಗಳ ಚೀಟಿ ಬರೆದು ಕೊಡುತ್ತಾರೆ ? ಅಥವಾ ಅವನೇ ಇಂಥ ಔಷಧಿ ಚೀಟಿಗಳನ್ನು ಬೇರೆ ರೋಗಿಗಳಿಂದ ಕದ್ದಿರಬಹುದೇ ? ಅಂತೂ ಅವನು ವಿದ್ಯಾರ್ಥಿಗಳ ಔದಾರ್ಯವನ್ನೇ ಬಂಡವಾಳ ಮಾಡಿಕೊಂಡ!
ನಾನು ಚಿಕ್ಕಂದಿನಲ್ಲಿದ್ದಾಗ
ನಮ್ಮ ಮನೆಯಲಿರುವುದೊಂದು ನಾಯಿ ಮರಿ ಅದು ಮಾಡುವುದು ಯಾವಾಗಲು ಕಿರಿ ಕಿರಿ ಅದರ ಹೆಸರು ಸ್ವೀಟಿ ಅದು ಬಲು ಚೂಟಿ. ಒಂದು ದಿನ ಸ್ವೀಟಿ ಹೋಯಿತು ಶಾಲೆಗೇ ಅದರ ಚೇಷ್ಟೆಯೋ ಬಗೆ ಬಗೆ ಅದರಿಂದ ತರುವುದು ನಗೆ. ಶಾಲೆಯಲ್ಲಿ ಸ್ವೀಟಿಯೇ ರಾಣಿ ಅದರ ಗುರುಗಳ ಹೆಸರು ಟೋನಿ ನಾನು ಸೇರಿಸಿದ ಶಾಲೆಯ ಹೆಸರು ಟೌನ್ ಕಾನ್ವೆಂಟು ದಿನವೂ ಸ್ವೀತಿಯ ಸ್ನೇಹಿತರ ,ಗುರುಗಳ ಓದುವುದಿಲ್ಲ ಬರೆಯುವುದಿಲ್ಲ ಹೋಂ ವರ್ಕಂತೂ ಮಾಡುವುದೇ ಇಲ್ಲ ,ಶಿಸ್ತಿಲ್ಲ ಹೇಳಿದ ಹಾಗೆ ಕೇಳುವುದಿಲ್ಲ ಎಂದು ಕೇಳಿ ಕೇಳೆ ನನಗೂ ಸಾಕಾಗಿ ಹೋಯ್ತು ಭುದ್ದಿ ಕಲಿಸಲು ಕೋಲನ್ನು ಹಿಡಿಯೋಣ ಎಂದರೆ ತಕ್ಷಣ ಎಚ್ಚರವಾಯ್ತು ನೋಡಿದೆ ಅದು ಕನಸು ಅಯ್ಯೋ !ನಾಯಿ ಮರಿಯೂ ಶಾಲೆಗೇ ಹೋಗುವುದಿದ್ದರೆ ಹೇಗಿರುತ್ತಿತ್ತು ? ಇದು ಆಗಬಾರದೇ ನನಸು.
Tuesday, April 14, 2009
ಮರೆಅಯಲೆಂತು ನಿನ್ನ !!!?
ಮರೆಯಲೆಂತು ಆದದ್ದೆಲ್ಲವ ?
ಚಿರಕಾಲವೀ ನೆನಹುಗಳು .ಪಾರ್ಥನ
ಇಟ್ಟ ಗುರಿ ,ಬಿಟ್ಟ ಬಾಣದಂತೆ
ನೇರ ಹೃದಯವ ಛೇದಿಸುವುದು .
ಕಳೆದ ನಿನ್ನೆಗಳ ಕಹಿ ನೆನಹುಗಳಿಗೇಕೆ
ನನ್ನಿಂತು ಕಾಡಿ ಪೀಡಿಸುವ ಚಪಲ?
ಇಲ್ಲ ಸಲ್ಲದ ನೆಪಹೊತ್ತು ಕರೆಯದ
ಅತಿಥಿಯಂತೆ ಬಂದೇಕೆ ಸುಳಿದುಹೋಗುವುದು?
ಬೆಂಬಿಡದೆ ಕಾಡಿ ಹುಚ್ಚೆದ್ದು ಕುಣಿವ ಈ ಪರಿಗೆ
ಬೇಸೆತ್ತು,ಮುನಿದು ಕೋಪ ಕಾರಿದರೆ
ಅಡಗಿ ಮತ್ತೇಕೆ ನುಸುಳಿ ಕಾಯ ಬಿಚ್ಚಿ
ಎದೆ ಮೇಲೆ ಕಾಲಿಟ್ಟು ಗಹ ಗಹಿಸಿ ನಗುವುದು ?
ಬಿಟ್ಟು ಹೋದ ಸಂಬಂಧಗಳ ಮೂಹಪಾಶದಿ ಬಳಸಿ ,
ತಲ್ಲಣಗಳ ವ್ರುಧ್ಧಿಸಿ ,ಶಾಂತತೆಯ ಕದಡಿ ,
ಅಳುವ ಅರಳಿಸಿ ,ನಗುವ ಮುದುಡಿಸಿ
ಸಂಭ್ರಮಿಸುತ ದಾಹವನ್ನೇಕೆ ತಣಿಸಿಕೊಳ್ಳುವುದು?
ಬೇಡ !!! ಪೀಡಿಸದಿರು ನೆನಪೇ ........................
ಎನ್ನ ಕಾಡುವ ನಿನ್ನ ಸಾಂಗತ್ಯಕ್ಕೆ ಕುಣಿಕೆ ಏರಿಸಿ
ಅಂತ್ಯ ಮಾಡಿ ಅಂದೇ ಶ್ರದ್ಧಾಂಜಲಿಯ ಅರ್ಪಿಸಿದೆ
ಆದರೂ ........ಆದರೂ................
ಮತ್ತೆ ಬಂದಿರುವೆಯಲ್ಲ
Sunday, April 12, 2009
ಕವಿ ಹೃದಯ
Wednesday, April 8, 2009
ಆಕಳಿಕೆ
ಹುಡುಕಾಟ
ಎಷ್ಟು ಹುಡುಕುವುದೋ ನಾ ಬೇರೆ ಕಾಣೆ
ಆ ಮಗ್ಗುಲು ಈ ಮಗ್ಗುಲು ಎಲ್ಲೂ ಕಾಣುತ್ತಿಲ್ಲ
ಅಲ್ಲೇ ಕೂಡಿ ಹಾಕಿದ್ದೆ ಕೈ ತಪ್ಪಿ ಪರರ ಪಾಲಾಗಿದೆಯಮ್ಬ
ಆತಂಕದಲ್ಲಿ ,ಇಲ್ಲ !ಅಲ್ಲೇ ಇದ್ದ ನೆನಪು !
ನೆನಪು ವಂಚಿಸುವುದಿಲ್ಲ .ಅಂದು ಕಂಡದ್ದು ಕಂಡು ಇಚ್ಚಿಸಿದ್ದು
ಇಚ್ಚಿಸಿ ಕರೆ ತಂದಿದ್ದು ಆ ಸುಕೋಮಲ ಸ್ಪರ್ಶಕ್ಕೆ ಮನಸೋತು ಎದೆಗಪ್ಪಿ
ಚುಂಬಿಸಿ ಇದೇ ಪುಸ್ತಕದ ಪುಟವೊಂದರಲ್ಲಿ ಅಡಗಿಸಿಇಟ್ಟಿದ್ದೆ
ಎಲ್ಲಿ ಮರೆಯಾಯಿತೋ ಆ ನವಿಲು ಗರಿ ?