Wednesday, March 25, 2009

ಬಲಿದಾನ


ಅಗೋ ನೋಡಿ ಕದನ ಕಣದಿ ವೈರಿ ಪಡೆಯ
ಕುತಂತ್ರ ಸಿಡಿವ ಬಾಂಬುಗಳ ಮಧ್ಯದಿ
ಬಲಿದಾನಗೈದ ಅಮರ ಯೋಧರ
ರಕ್ತ ಸಿಕ್ತ ಕಾಯಗಳು ಸಾಗುತಿವೆ

ಭೀಕರ ಯುದ್ಧದಿ ಗುಂಡೇಟು ಗಳಿಗೆ ನಲುಗಿ
ಜೀವನ್ಮರಣ ದಲಿ ಸಿಲುಕಿ ಯಮನೊಂದಿಗೆ
ಹೋರಾಟ ಮಾಡುತಲಿ ,ಯೋಧರ
ಆತ್ಮಗಳು ಅವ್ಯಕ್ತ ಯಾತನೆಯ ಅನುಭವಿಸುತಲಿವೆ .

ಕೊರೆವ ಚಳಿಯಲಿ ಬೆಂಡಾಗಿ ,ಸುಡು ಬಿಸಿಲಿನಲ್ಲಿ
ಕೆಂಪಾಗಿ ,ಪ್ರಾನತರ್ಪನಗೈಯ್ದ ನಿಷ್ಪಾಪಿ ವೀರ
ಯೋಧರ ಆತ್ಮಗಳು ವೀರ
ಸ್ವರ್ಗದ ಹಾದಿ ಹಿಡಿಯುತಿವೆ .

ಮಾತೃ ಭೂಮಿಯ ಉಳಿಸಲು
ಸಮರದಿವೀರಕಂಕನವ ತೊಟ್ಟು ಬುಗಿಲೆದ್ದ ಬೆಂಕಿ ,
ಧೂಮ ಆಸ್ಪೋಟಗಳಲಿ ಅಗಲಿದ ವೀರನ
ನೆನೆದು ನಮ್ಮ ಕಂಗಳು ಅಶ್ರುಧಾರೆಯ ಸುರಿಸುತಲಿವೆ .

ಮಾಂತ್ರಿಕ ಮಳೆ


ಅದೆಂತಹ ಕಲೆಗಾರಿಕೆ ನಿನ್ನದು ಮಳೆಯೇ !
ಚಿಗುರುಗಳ ಬರೆದು ,ಹೂ ಮೊಗ್ಗುಗಳ ಬಿಡಿಸಿ
ಹಸಿರು ಚಿತತಾರಗಳ ಮೊಒಡಿಸಿ ,ಹಳ್ಳ ಕೊಳ್ಳಗಳಿಗೆ
ಕೆಮ್ಬನ್ನವ ತುಮ್ಬಿಸುವಷ್ಟು !

ಅದೆಂತಹ ರಸಿಕತೆ ನಿನ್ನದು ಮಳೆಯೇ
ಅರಳಿದ ಮುಸ್ಸಂಜೆಯಲಿ ಭಾವ ಬಿಂದುಗಳ
ಭೋರ್ಗರಿಸಿ ,ಇಳೆಯ ನಾಚಿಕೆಯಲಿ ಕೆಂಪಾಗಿಸಿ,
ಮುದ್ದೆಯಾಗಿಸಿ ಮುತ್ತಿನ ಅಲಂಕಾರಗೈಯುವಷ್ಟು !

ಅದೆಂತಹ ಶಕ್ತಿಯು ನಿನ್ನದು ಮಳೆಯೇ
ಭಾವ ಜೀವಂತಿಕೆಯ ಬರುವಿಕೆಗೆ ಕಾದ ಕನ್ಗಳನ್ನು
ತಂಪಾಗಿಸುವಷ್ಟುಈ ಕವಿ ಹೃದಯಕ್ಕೆ
ಜೀವಧಾರೆಯಾಗಿ ಹಸಿರಾಗಿಸುವಷ್ಟು !

ಅದೆಂತಹ ಲೀಲೆಯು ನಿನ್ನದು ಮಳೆಯೇ
ಎಲ್ಲೋ ಹುಟ್ಟುವ ಮೇಘಗಳ ಎಲ್ಲೋ ಕರೆತಂದು
ಮಳೆಗರೆಸಿ ಇಳೆಯಪ್ಪುವ ಪ್ರತಿ ಬಿಂದುಗಳಲ್ಲೂ
ನಾದ ,ಗಂಧಗಳ ಹೊಮ್ಮಿಸುವಷ್ಟು !

ಅದೆಂತಹ ಮಾಂತ್ರಿಕತೆ ನಿನ್ನದು ಮಳೆಯೇ
ಮಣ್ಣ ಕಣ ಕಣಕೂ ಜೀವ ತುಂಬಿ ,ಫಳ ಫಳ ಸುವ
ತಾರಾಗಣ ,ಬೆಳ್ಳನೆಯ ಚಂದಮನನ್ನೂ ಮರೆಯಾಗಿಸಿ
ಮಿಂಚಿನ ಸಂಚಾರದಲ್ಲೇ ಕತ್ತಲ ಕೊನೆಯಾಗಿಸುವಷ್ಟು

ಇದೆಂಥಾ ಲೋಕವಯ್ಯ ?

ಇದ್ದಕಿದ್ದಂತೆ ನಿಮ್ಮ ಮನೆ ಫೋನ್ ರಿಂಗಣಿಸುತ್ತದೆ .ನೀವು ರಿಸೀವರ್ ಎತ್ತಿ ಹೆಲೋ ಎನ್ನುತ್ತಿರಿ ಆಗ ಸುಂದರವಾದ ಅಪರಿಚಿತ ಹೆಣ್ಣು ಧ್ವನಿಯೊಂದು " namaste ಸರ್ ನಿಮಗೊಂದು ಗುಡ್ ನ್ಯೂಸ್ ನಿಮ್ಮ ಹೆಸರನ್ನು ಫೋನ್ ಬುಕ್ ನಲ್ಲಿ ಹುಡುಕಿ ಆಯ್ಕೆ ಮಾಡಿದ್ದೇವೆ .ನಿಮಗೆ ನಮ್ಮ ಸಂಸ್ಥೆಯಾದ .............ರಿಂದ ವಿಶೇಷ ಉಡುಗೊರೆ ದೊರೆಯಲಿದೆ ದಯವಿಟ್ಟು ಈಗ ನಾನು ಹೇಳುವ ವಿಳಾಸಕ್ಕೆ ನಿಮ್ಮ ಹೆಂಡತಿ ಮಕ್ಕಳೊಂದಿಗೆ ಬದು ಸ್ವೀಕರಿಸಿ ಎಂದು ನಿಮಗೆ ಮಾಡುವೆ ಮನೆಗೆ ಆವ್ಹಾನಿಸುವಂತೆ ಕರೆಯುತ್ತದೆ .ನಿಮಗೆ ಮಾತನಾಡಲೂ ಅವಕಾಶ ಕೊಡದೆ ನಿಮ್ಮ ಹೆಸರು ವಿದ್ಯಾಭ್ಯಾಸ ಸಂಬಳ ಪ್ರತಿಯೊಂದು ಮಾಹಿತಿಯನ್ನೂ ಸಂಗ್ರಹಿಸುತ್ತದೆ .
ನೀವೂ ಕೂಡ ಆ ಮಾತುಗಳನ್ನು ಅಕ್ಷರಸಹ ನಮ್ಬುತ್ತಿರಿ ಏಕೆಂದೆರೆ ಆ ಧ್ವನಿಯಲ್ಲಿ ನಿಮಗೆ ನಂಬಿಕೆ ಹುಟ್ಟಿಸುವ ಆಕರ್ಷಣೆ ಇದೆ .ಹೇಳಿದ ಸಮಯಕ್ಕೆ ಅವರು ಕೊಟ್ಟಿರುವ ವಿಳಾಸಕ್ಕೆ ನೀವು ಅರೆಸಿ ಹೋಗುತ್ತಿರಿ .ಆ ಜಾಗ ಊರಿನಿಂದ ಹೊರಗಿದ್ದರೂ ಆಶ್ಚರ್ಯವಿಲ್ಲ . ನಿಮ್ಮದೇ ವಾಹನ ವಿದ್ದರೆ ಪೆಟ್ರೋಲ್ ಖರ್ಚು ಮಾಡಿಕೊಂಡು ಅಥವಾ ಆಟೋ ದಲ್ಲಿ ಮೀಟರ್ ಗಿಂತ ಜಾಸ್ತಿ ದುಡ್ಡು ಕೊಟ್ಟು ಆ ಜಾಗವನ್ನು ತಳಪುತ್ತಿರಿ .

ನಿಮಗಿಂತ ಮುಂಚೆಯೇ ಅಲ್ಲಿಗೆ ಬಂದು ಅಲ್ಲಿನ ಮಾರಾಟ ಪ್ರತಿನಿಧಿಗಳ ಉದ್ದುದ್ದ ಭಾಷಣ ಕೇಳಿ ಸುಸ್ತಾಗಿ , ಮುಖ ಸಿಂಡರಿಸಿಕೊಂಡು ಬಕರಾಗಳಾಗಿ ಹೊರಬರುತ್ತಿರುವವರನ್ನು ಕಂಡು ಇನ್ನೇನು ನೀವು ಕಾಲ್ತೆಗೆಯಬೇಕು ಅನ್ನುವಷ್ಟರಲ್ಲಿ ಅಲ್ಲೇ ಇರುವ ಕಂಪನಿಯ ಮಂದಿ ನಿಮಗೆ ಮುಗುಳ್ನಗೆ ಕೊಡುತ್ತಾ ಒಳಗೆ ಸ್ವಾಗತಿಸುತ್ತಾರೆ !ಬಳಿ ಪಶುಗಳಂತೆ ಬೇರೆ ದಾರಿ ಇಲ್ಲದೆ ನೀವು ಒಳಗೆ ತೆರಳುತ್ತಿರಿ ಅಲ್ಲಿ ಪ್ರತಿ ಕುಟುಂಬಕ್ಕೂ ಪ್ರತ್ಯೇಕ ಕುರ್ಚಿ ಟೇಬಲ್ ಗಳಿರುತ್ತವೆ ನೀವು ಹೋದ ತಡ ಬಕಪಕ್ಷಿಯಂತೆ ಕಾಯುತ್ತಿದ್ದ ಮಾರಾಟ ಪ್ರತಿನಿಧಿಯೊಬ್ಬ ನಿಮ್ಮನ್ನು ಅಲ್ಲೇ ಕೂರಿಸಿ ದುಂಡು ಮೇಜಿನ ಸಮ್ಮೇಳನವನ್ನು ಪ್ರಾರಂಭಿಸುತ್ತಾನೆ .ಬೇರೆಯವರೂ ನಿಮ್ಮಂತೆ ಅಕ್ಕ ಪಕ್ಕ ಕುಳಿತಿರುವುದರಿಂದ ಮೆಲ್ಲನೆ ಮಾತನಾಡುತ್ತಾನೆ . ಆದ್ದರಿನ ಆತ ನಿಮಗೆ ಬಹಳ ಸಮೀಪದಲ್ಲೇ ಕುಳಿತು ಮಾತನಾಡುತ್ತಾನೆ .ಆದ್ದರಿಂದ ನೀವು ಬೆನ್ನು ಬಾಗಿಸಿ ಅವನ ಮುಂದೆ ಬಂದು ಕೂರಬೇಕಾಗುತ್ತದೆ ಅದು ಅವನ ಪ್ರಾರ್ಥನೆಯಾಗಿರುತ್ತದೆ ಆಗ್ರಹವಲ್ಲ .ನಿಮಗೆ ಅರ್ಥವಾಗುವ /ಆಗದ ಕಂಪನಿಯ ಎಲ್ಲ ವಿಷಯಗಳ ಬಗ್ಗೆ ನಿಮ್ಮ ಮುಂದೆ ಉಪನ್ಯಾಸ ನೀಡುತ್ತಾನೆ .ಒಂದೇ ಸಮನೆ ಮಾತಿನ ಮಳೆಯೇ ಹುಯ್ಯುತ್ತದೆ .ಸ್ವಲ್ಪ ವಿಶ್ರಾಂತಿಗಾಗಿ ನೀವು ಹಿಂದೆ ಕುರ್ಚಿಗೆ ಒರಗಿದರೂ ಆತ ಹಲ್ಲು ಕಿರಿಯುತ್ತಾ ಕೊಂಚ ಮುಂದೆ ಬರುವಂತೆ ಕೇಳಿಕೊಳ್ಳುತ್ತಾನೆ .ಅವನ ಮಾತುಗಳನ್ನು ಕೇಳಬೇಕಲ್ಲ ಎಂಬ ಮಾನಸಿಕ ಹಿಂಸೆ ಒಂದೆಡೆ ಯಾದರೆ ಈ ಧಯ್ಯಿಕ ಶಿಕ್ಷೆ ಬೇರೆ ನಿಮ್ಮನ್ನು ಕೆರಳಿಸುತ್ತದೆ ಆದರು ಸಮಾಧಾನ ಮಾಡಿಕೊಳ್ಳುತ್ತಿರಿ ಉಡುಗೊರೆಗಾಗಿ .

ನಿಮಗೆ ಹತ್ತಿರದವನೇನೋ ಎನ್ನುವ ಮಟ್ಟದಲ್ಲಿ ನಿಮ್ಮ ಎಲ್ಲ ಖಾಸಗಿ ವಿಷಯಗಳನ್ನು ಮಾತನಾಡುತ್ತಾನೆ ನಿಮ್ಮನ್ನು ಅಟ್ಟದ ಮೇಲೆ ಕೂರಿಸುತ್ತಾನೆ .ನಿಮ್ಮ ಪತ್ನೀ ಮಕ್ಕಳಿಗೆ ಅವನ ಮಾತುಗಳು ಬೋರು ಹೊದೆಸುತ್ತಿರುತ್ತವೆ ,ಆಗ ಮನೆಗೆ ಬನ್ನಿ ವಿಚಾರ್ಸ್ಕೊತಿನಿ ಎಂದು ನಿಮ್ಮ ಹೆಂಡತಿ ನಿಮ್ಮನ್ನು ದುರುಗುಟ್ಟಿ ನೋಡಿದರೂ ಆಶ್ಚರ್ಯವಿಲ್ಲ .

ನೀವು ನಿಮಗೆ ಬಂದಿರುವ ಉದುಗೊರೆಬಗ್ಗೆ ಕೇಳಿದರೆ ಅವರ್ಯಾರೂ ಅದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ .ಬದಲಾಗಿ ತಮ್ಮ ಸಂಸ್ಥೆ ,ಅದರ ಕಾರ್ಯಗಳು ,ಸದಸ್ಯತ್ವ ಪಡೆದು ಕೊಳ್ಳುವ ಬಗ್ಗೆ ಗಂಟೆ ಗಟ್ಟಲೆ ಕೊರೆದು ನಿಮ್ಮ ತಲೆಯೊಳಗೆ ಕೈ ಹಾಕುತ್ತಾರೆ .ನಿಮ್ಮನ್ನು ತಮ್ಮ ಸದಸ್ಯರನ್ನಾಗಿ ಮಾಡಿಕೊಳ್ಳಲು ಶತಾಯ ಗತಾಯ ಪ್ರಯತ್ನಿಸುತ್ತಾರೆ .ಊಹು ನೀವು ಬಗ್ಗಲಿಲ್ಲ ಎಂದಾಗ ಕೊನೆಗೆ ಧನ್ಯವಾದ ಹೇಳಿ ಐಸ್ ಕ್ರೀಮ್ ಬೌಲನ್ನೋ ಅಥವಾ ಪೆನ್ ಸೆಟ್ ಅನ್ನೋ ಕೊಟ್ಟು ಕಳುಹಿಸುತ್ತಾರೆ .ಅಲ್ಲಿನವರು ನಿಮಗೀಗ ಕೊಟ್ಟಿರುವ ಗಿಫ್ಟ್ ನೀವು ಇಲ್ಲಿಗೆ ಬರಲು ಕರ್ಚು ಮಾಡಿರುವ ಆಟೋ ಚಾರ್ಜು ಅಥವಾ ಪೆಟ್ರೋಲ್ ಬೆಲೆಯ ಅರ್ಧದಷ್ಟಿರುವುದಿಲ್ಲ .

ಅಬ್ಬ ಎಂತಹ ಬುಸಿನೆಸ್ ಇದು !ಇಂತಹ ಅನುಭವ ನಿಮಗಾಗಿಲ್ಲವೇ ಹಾಗಾದ್ರೆ ಕಂಗ್ರಾಟ್ಸ್ ನೀವು ಬಕರ ಆಗಿಲ್ಲ ಅಂತ ಅರ್ಥ .ಎಚ್ಚರಿಕೆ ಸಾಮಾನ್ಯವಾಗಿ ದೂರವಾಣಿಗಳಲ್ಲಿ

ನೀವು ಒಂದೇ ಬಾರಿಗೆ ಲಕ್ಷದಷ್ಟು ಹಣವನ್ನು ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆಯ ಬಹುದು
ಫಾರಿನ್ ಟ್ರಿಪ್ಪಿಗೆ ಉಚಿತವಾಗಿ ಹೋಗಬಹುದು
ಲಕ್ಕಿ ದಿಪ್ಪಿನಲ್ಲಿ ನಿಮ್ಮ ಹೆಸರು ಆಯ್ಕೆಯಾಗಿದೆ
ವಿದೇಶಿ ಲಾಟರಿ ಬಂದಿದೆ

ಹೀಗೆ ಹೇಳಿ ತಮ್ಮ ಗಾಳಕ್ಕೆ ನಿಮ್ಮನ್ನು ಸಿಕ್ಕಿಸಿ ಕೊಳ್ಳುತ್ತಾರೆ.ದಯವಿಟ್ಟು ಜಾಕರೂಕತೆಯಿಂದ ಇರಿ .ನಿಮ್ಮ ಖಾಸಗಿ ವಿಷಯಗಳನ್ನು ಅವರಿಗೆ ಬಿಟ್ಟು ಕೊಡ ಬೇಡಿ .ನಿಮ್ಮ ಬ್ಯಾಂಕ್ ಅಕೌಂಟ್ ನಂಬರ್ ,ಕ್ರೆಡಿಟ್ ಕಾರ್ಡ್ ನಮ್ಬರ್ಗಳಬಗ್ಗೆ ಏನೂ ಮಾಹಿತಿ ನೀಡ ಬೇಡಿ .ಅವರಿಗೆ ತಿಳಿದಿದೆ ಹೇಗೆ ಮಧ್ಯಮ ವರ್ಗದ ಜನರನ್ನು ತಮ್ಮ ಗುಂಡಿಗೆ ಬೀಳಿಸಿ ಕೊಳ್ಳಬಹುದೆಂದು .ಸುಮ್ಮನೆ ಗಂಟಗಟ್ಟಲೆ ನಮ್ಮ ಹಣ ಸಮಯ ನೆಮ್ಮದಿ ಎಲ್ಲವನ್ನೂ ವ್ಯರ್ಥ ಮಾಡಿಕೊಂಡು ಅವರಿಂದಲೇ ಮೋಸ ಹೋಗಿ ಇದೆಂತ ಲೋಕವಯ್ಯ ಎಂದು ತಲೆ ಮೇಲೆ ಕೈ ಬರುವ ಮುನ್ನ ನೆನೆಪಿರಲಿ ಇದಿಂದು ಪಕ್ಕಾ ಬುಸಿನೆಸ್ ಫ್ರಾಡ್ .

ಅಬಲೆಯರಲ್ಲ ನಾವು !

ಗಾಢ ಸಂಪ್ರದಾಯದೊಡಲೊಳು

ಮಥಿಸಿ ಬಂದ

ತಾರತಮ್ಯದಾಲಾಹಲವ ಮೆಟ್ಟಿ

ಜಯರಥವನೆರಿದ ವೀರವನಿತೆಯರು ನಾವು ಅಬಲೆಯರಲ್ಲ


ಅಂಧಃಕಾರದ ಕಾಲಗರ್ಭದಲಿ ಕ್ಷೀಣ ಸ್ವರದಲ್ಲಿ

ಅರಣ್ಯ ರೋಧನವ ತಡೆದು ಜೀತ ವ್ರುಕ್ಶವ ಬುಡ

ಮೇಲು ಮಾಡಿ ಆಶಾವಾದದ

ಕಾದಿಮ್ಬನಿಯ ಅಪೇಕ್ಷಿಸುವ ನಾವು ಅಬಲೆಯರಲ್ಲ


ಉಚ್ವಾಸ ನಿಶ್ವಾಸಗಳಲ್ಲಿ ಸ್ಥೈರ್ಯವ ತುಂಬಿ

ಹೃದಯದಲ್ಲಿ ಆತ್ಮಗೌರವ ಹೊಂದಿ ವದನದ ಮೇಲಿನ

ಪರದೆ ತೆರೆದು ಮುಕ್ತ ಜಗದ

ಆಶಾ ಕಿರಣವ ನೋಡುವ ನಾವು ಅಬಲೆಯರಲ್ಲ


ನವವರ್ಷದ ಸದ್ಭಾವನೆಯ ಬೆಳಕೆ ನಿರ್ಭಾವಿಯಾಗದೆ

ದಾರಿ ತೋರು ಸ್ವಾತಂತ್ಯ್ರ ಸಮಾನತೆಯ ಕಹಳೆಯ

ಮೊಳಗಿಸಿ ಆತ್ಮಬಲವ

ವ್ರುಧಿಸಿ ಹೂನ್ಕರಿಸು ನಾವು ಅಬಲೆಯರಲ್ಲವೆಂದು

Tuesday, March 24, 2009

ನನ್ನ ಶಂಕರ


ಆ ಶೈಲಾ ದುದಯಾ ತ್ತಥಾಸ್ತಗಿರಿತೋ
ಭಸ್ವದ್ಯಶೊರಶ್ಮಿಭಹವ್ಯಾಪ್ತಂ ವಿಶ್ವಮನಂಧಕಾರಮಭಾವದ್ಯಸ್ಯ ಸ್ಮಶಿಶ್ಯೇರಿದಂ
ಆರಾದ್ ಜ್ಞಾನದಭಿಸ್ತಿಭಿಹಿ ಪ್ರತಿಹತಶ್ಚನ್ದ್ರಾಯುತೆ ಭಾಸ್ಕರಹ
ತಸ್ಮೈ ಶಂಕರ ಭಾನವೇ ತನುಮನೋ ವಾಭಿರ್ನಮಸ್ಕುರ್ಮಹೆ

ಉದಯಗಿರಿಯಿಂದ ಅಸ್ತಗಿರಿಯವರೆಗೂ ಹರಡಿದ ಯಾರ ಶಿಷ್ಯರ ಉಜ್ವಲ ಕೀರ್ತಿಯ ಕಿರಣ ಗಳ ಹಬ್ಬುವಿಕೆಯಿಂದ ವಿಶ್ವದ ತಮಸ್ಸು ದೂರವಾಗಿದೆಯೋ ,ಯಾರ ಜ್ಞಾನದ ಕಿರಣಗಳಿಂದ ಹೊಡೆಯಲ್ಪತ್ತು ಸೂರ್ಯನೂ ಚಂದ್ರನಂತೆ ಕಾನುವನೋ ಆ ಶಂಕರ ಭಾನುವಿಗೆ ತನು.ಮನ,ವಾಕ್ಕುಗಳಿಂದ ನಮಸ್ಕರಿಸುತ್ತೇವೆ.

ಸನಾತನ ಧರ್ಮ ಅವಸಾನದ ಹಾದಿಯನ್ನು ಹಿಡಿದಿತ್ತು ,ಸತ್ಯ ಮರೆಯಾಗಿ ,ಜನ ಕಣ್ಣಿದ್ದೂ ಕುರುಡಾಗಿದ್ದರು ,ವಾಮಾಚಾರ ,ನರಬಲಿ ,ಚಾರ್ವಾಕರ ನಾಸ್ತಿಕವಾದ ಎಲ್ಲೆಯಿಲ್ಲದೆ ಬೆಳೆಯ ತೊಡಗಿತ್ತು .ವೈದಿಕ ತತ್ವ ,ಸಿಧಾನ್ತಗಳು ಪಂಡಿತ ಮಹಾಶಯರ ಕಪಿ ಮುಷ್ಟಿಯಲ್ಲಿ ಸಿಲುಕಿ ಸಾಮಾನ್ಯರ ಪಾಲಿಗೆ ಮರೀಚಿಕೆ ಯಾಗಿದ್ದವು .ಶಾಸ್ತ್ರಗಳ ಅಂತಃಸತ್ವ ಮರೆಯಾಗಿದ್ದವು ನನ್ನ ದೇವರು ಶ್ರೇಷ್ಠ ನಿನ್ನ ದೇವರು ಕನಿಷ್ಠ ಎಂಬ ವಾಗ್ಯುದ್ಧ ಮುಗಿಲು ಮುತ್ತಿಟ್ಟು.antahಅ ಸಂಧಿಗ್ನ ಪರಿಸ್ಥಿತಿಯಲ್ಲಿ ಶಂಕರ ಜನನ ವಾಯಿತು .

ಶಂಕರರು ಇತಿಹಾಸದ ಅಮರ ಪುಟಗಳಲ್ಲಿ ಅಮೊಘಸ್ಥಾನ ಪಡೆದು ಜಗದ್ಗುರುವಾಗಿ ಅವರು ಅಖಂಡ ಪರಿಶ್ರಮ ಮತ್ತು ಅನುಪಮ ಪಾಂಡಿತ್ಯದಿಂದ ನೀಡಿದ ಒಂದೊಂದು ವಿಚಾರವೂ ಅಣಿ ಮುತ್ತುಗಳೇ .ಜಗದ್ಗುರುಗಳು ದೇಹ ದಾನ ಮಾಡಿ ಸುಮಾರು ಸಾವಿರದ ಮುನ್ನೂರು ವರ್ಷಗಳಾಗಿದ್ದರೂ ಇಂದಿಗೂ ಅವರ ಹೆಸರು ,ತತ್ವಗಳು ವಿಶ್ವಾದ್ಯಂತ ಚಿರಸ್ಥಾಯಿ .

ಶಂಕರರೇ ಹೇಳಿದಂತೆ ಬ್ರಹ್ಮ ಸತ್ಯಮ್ ಜಗನ್ಮಿತ್ಯಂ ಜೀವೋ ಬ್ರಹ್ಮ ಇವ ನಪರ; ಅರ್ಥಾತ್ ಬ್ರಹ್ಮ್ಹವೊಂದೆ ಸತ್ಯ ,ಅದು ಎರಡಿಲ್ಲ ಸತ್ ,ಚಿತ್ ,ಆನಂದವೇ ಅದರ ಸ್ವರೂಪ .ಅದು ಇಂದ್ರಿಯಾತೀತವಾದುದ್ದು ,ಅಭೆದ್ಯವಾದುದ್ದು ,ಸಕಲ ಚರಾಚರ ಸೃಷ್ಟಿಯ ಆಧಾರವೂ ,ಸರ್ವಾನ್ತರ್ಯಾಮಿಯು ,ಚೆನಗಳ ಚೈತನ್ಯವೂ ,ಅನಿತ್ಯಗಳಲ್ಲಿ ನಿತ್ಯವೂ ,ಅಣುವಲಲದ್ದುaವ್ಯಯವೂ ಆಗಿದೆ ಆದರೆ ಚಿತ್ತ ಶುದ್ಧಿ ಇಲ್ಲ ದ ನಾವು ಮಾಯೆಯ ವಶದಿಂದ ಅನಂತನೂ ,ಶುದ್ಧನೂ ,ನಿರಾಕಾರ,ನಿರ್ಗುಣ ನಿರಂಜನ ,ಸ್ವಪ್ರಾಕಷಕ ಬ್ರಹ್ಮನನ್ನು ಕಾಣಲಾಗದೆ ತೊಲಲಾದುತ್ತೇವೆನಾವು ಬ್ರಹ್ಮನನ್ನು ಕಾನುತ್ತೆವೆಯೋ ಅಂದು ಭಯವಿಲ್ಲ ,ಯಾರಲ್ಲಿಯೂ ದ್ವೇಷವಿಲ್ಲ ,ಕದನವಿಲ್ಲ.ಏಕೆಂದರೆ ಆತ್ಮದಲ್ಲಿ ಬ್ರಹ್ಮನನ್ನು ಕಾನುವವನಿಗೆ ಲಿಂಗ ,ಜಾತಿ,ಧರ್ಮ,ಭಾಷೆ ,ರೂಪ ಸೌಂದರ್ಯಗಳ ಮೋಹಪಾಶ ಎಂದೂ ಬಂಧಿಸಲು ಸಾಧ್ಯವಿಲ್ಲ .ಆತ ಸ್ವಾತ್ಮರಾಮನಾಗಿ ,ಚಿದಾನಂದ ರೂಪಿಯಾಗಿ ಸಮನ್ವಯತೆ ,ಪ್ರೀತಿ ,ವಿಶ್ವಾಸಗಳಲ್ಲಿ ನಂಬಿಕೆಯಿತ್ತು ಇಡೀ ವಿಶ್ವವನ್ನೇ ಒಂದಾಗಿ ನೋಡುವ ಶಕ್ತಿ ಮೂಡಿ ಬರುತ್ತದೆ ಆ ಕ್ಷಣ ವಿಶ್ವ ಆತನ ಅಂಗೈ ಯಲ್ಲಿನ ನಲ್ಲಿಕಾಯಿಯಂತೆ ಕಾಣುತ್ತದೆ .
ಶಂಕರರು ಉಚ್ಚರಿಸಿದ ಅಹಂ ಬ್ರಹ್ಮಾಸ್ಮಿ ಹಾಗು ತತ್ವಮಸಿ ಅಂದರೆ ನೀನು ಬ್ರಹ್ಮ ನಾನು ಬ್ರಹ್ಮ ಎಂಬ ಉಕ್ತಿಯನ್ನು ನಾವು ಪಾಲಿಸಿದ್ದೆ ಆದರೆ ಕ್ರಮೇಣ ವಿಶ್ವಮಾನವತೆಯ ಪವಿತ್ರಗಂಗೆ ಹೃದಯದಿಂದ ಹೃದಯಕ್ಕೆ ಅಮ್ರುತವಾಹಿನಿಯಾಗಿ ಹರಿಯುತ್ತದೆ ,ವಿಶ್ವ ಚೈತನ್ಯದ ಸುಗಂಧ ಪಸರಿಸುತ್ತದೆ .

ಅಸಮಾನತೆ ಇದಕ್ಕೆ ನೂರೆಂಟು ಮುಖಗಳು ,ಆರ್ಥಿಕ ಅಸಮಾನತೆ ,ಧಾರ್ಮಿಕ ಅಸಮಾನತೆ ,ವರ್ಣ ಅಸಮಾನತೆ ,ಲಿಂಗ ಅಸಮಾನತೆ ಇವು ತಮ್ಮ ಕ್ರೂರ ಮೊಗಗಳನ್ನು ತೋರಿದೆಡೆಯಲ್ಲ ನೋವಿನ ಚೀತ್ಕಾರ ,ರಕ್ತದ ಓಕುಳಿ ,ಕಣ್ಣೀರು ,ಸಂಕಟಗಳ ಕಾರುಬಾರು ,ಜಾತಿ ಧರ್ಮ ಭಾಷೆಗಳೆಂಬ ಸಂಪ್ರದಾಯಗಳ ಪರಿಧಿಯೊಳಗೆ ಇದು ನನ್ನ ಭೂಮಿ ಇವರು ತನ್ನವರು ಅವರು ಪರರು ಎಂಬಂತೆ ಬದುಕುವುದೇ ಅಭ್ಯಾಸವಾಗಿಹೋಗಿದೆ .ಎಲ್ಲರ ಹೃದಯಗಳಲ್ಲೂ ಪುಟ್ಟ ಪುಟ್ಟ ಹಿಟ್ಲರ್ ಗಳು ಜೀವ ಪಡೆಯುತ್ತಿದ್ದಾರೆ .ಧರ್ಮ ,ಮತ ,ಹಣ ಗಳ ಹೆಸರಿನಲ್ಲಿ ಭಾವನಾತ್ಮಕವಾಗಿ ನಿರ್ಜೀವಿಗಲಾಗುತಿದ್ದೇವೆ ,ಕೀಳರಿಮೆ ,ಮೇಲರಿಮೆ ಗಳ ಪೊಳ್ಳು ಭ್ರಮೆಗಳ ಮಧ್ಯೆ ಹೃದಯಗಳು ತೊಲ್ಲಗುತ್ತಿವೆ ಅಸಮಾನತೆಯ ನೂರಾರು ನೇಣು ಕುಣಿಕೆಗಳು ಮುಗ್ಧರ ,ಬಡವರ ಕೊರಳುಗಳನ್ನು ಆವರಿಸುತ್ತಿವೆ .ಒಮ್ಮೆ ಶಂಕರರ "ಸರ್ವಸ್ಮಿನ್ನಪಿ ಪಶ್ಯಾತ್ಮಾನಂ ಸರ್ವೋತ್ಸೃಜ ಭೇದ ಜ್ಞಾನಂ "ಅರ್ಥಾತ್ ಎಲ್ಲರಲ್ಲಿಯಿ ನಿನ್ನನ್ನೇ ಕಾಣು ಎಲಾದರಲ್ಲಿಯು ಭೇದ ವೆನಿಸದಿರು ಎಂಬುದನ್ನೂ ಮನನ ಮಾಡಿಕೊಂಡರೆ ಈ ನೇಣು ಕುಣಿಕೆಗಳು ಮರೆಯಾಗುತ್ತವೆ,ಕೊರಳುಗಳು ವಿಮುಕ್ತವಾಗುತ್ತವೆ ,ಜಗದ ಕಲ್ಯಾಣದಲ್ಲಿ ಆತ್ಮ ಕಲ್ಯಾಣ ಕಂಡು ಬದುಕು ಸಾರ್ಥಕತೆಯನ್ನು ಪಡೆಯುತ್ತದೆ ಇದೊಂದು ರೀತಿಯ ಮುಕ್ತ ಸ್ಥಿತಿ .
ಆ ಸಮಯದಲ್ಲಿ ಮಾನವನ ಕೆಟ್ಟ ಹಸಿವು ,ದಾಹಗಳಿಗೆ ಕಡಿವಾಣ ಹಾಕಿ,ವಿಶ್ವಾತ್ಮದಲ್ಲಿ ಶರಣಾಗಿ ,ಎಲ್ಲ ಎಲ್ಲೆಗಳನ್ನು ಮೀರಿ ನಿಲ್ಲುತ್ತದೆ ತಾನೂ ಬದುಕಿ ಇತರರ ಬದುಕಿಗೆ ಅರ್ಥ ತರುತ್ತೇವೆ .ಆ ಕ್ಷಣ ಮಾನವತೆ ಮೆರೆಯುತ್ತದೆ .

ಅಪ್ಪಾನಿನಗೆ ................ನನ್ನ ನಮನ


ವಾತ್ಸಲ್ಯಮಯಿ ತಾಯಿ ಉತ್ತಮ ಮಾರ್ಗದರ್ಷಕನಾದ ತಂದೆ ಯನ್ನು ಪಡೆದ ಮಗ/ಮಗಳು ಈ ಸಮಾಜದ ಆಸ್ತಿಯಾಗುತ್ತಾರೆ .ಭಾವಿ ಭವಿಷ್ಯದ ಯಶಸ್ವೀ ಪ್ರಜೆಯಾಗುತ್ತಾರೆ .ಇತರರಿಗೆ ಆದರ್ಶವಾಗುತ್ತಾರೆ .

ಒಂದು ಮಗುವಿನ ಸರ್ವಾಂಗೀಣ ಅಭಿವೃದ್ಧಿಯಲ್ಲಿ ತಾಯಿಯ ಪಾತ್ರ ಎಷ್ಟಿದೆಯೋ ಅಷ್ಟೆ ಮಹತ್ವದ ಪಾತ್ರವನ್ನು ತಂದೆ ಕೂಡ ವಹಿಸುತ್ತಾರೆ .ಈ ಆಧುನಿಕ ಸಮಾಜದಲ್ಲಿ ಕೇವಲ ತಾಯಿ ಮಾತ್ರವಲ್ಲ ತಂದೆಯೂ ಮಗುವಿನ ಜವಾಬ್ಧಾರಿ ಹೊರಬೇಕಾಗುತ್ತದೆ .ತಾಯಿಯು ಉದ್ಯೋಗಸ್ಥಳಾಗಿರುವುದರಿಂದ ಮಗುವಿನ ಪೋಷಣೆಯ ಹೊಣೆಗಾರಿಕೆಯನ್ನು ತಾನು ಹಂಚಿಕೊಲ್ಲಬೇಕಾಗುತ್ತದೆ .ತಂದೆಯ ಹಿತಮಿತವಾದ ಶಿಸ್ತು ಹಾಗು ರಕ್ಷಣೆಯಲ್ಲಿ ಸರಿಯಾಗಿ ಬೆಳೆಯದ ಮಗು ಮುಂದೆ ಸಮಾಜ ಕಂಟಕ ವಾಗುತ್ತದೆ .

ಕೇವಲ ಜನ್ಮದಾತನಾಗಿದ್ದರೆ ಮಾತ್ರ ಸಾಲದು ಆತ ಸಮರ್ಥ ಹಾಗು ಜವಾಬ್ಧಾರಿಯುತ ತಂದೆಯೂ ಆಗಿರಬೇಕು .ಮಕ್ಕಳಲ್ಲಿ ತನ್ನ ಗುರಿ ,ಕನಸುಗಳ ಬಗ್ಗೆ ತಿಳಿಸಿ ಅವರನ್ನು ಅದಕ್ಕಾಗಿ ಮಾನಸಿಕವಾಗಿ ಸಿದ್ಧ ಪಡಿಸಿ ಮುಂದೆ ಆ ಸಾಧನೆಯ ಹಾಡಿ ತುಲಿಯುವವರೆಗೂ ಆತ ತಾಳ್ಮೆ ಹಾಗು ಸಂಯಮಗಳಿಂದ ಇರಬೇಕು .
ತಪ್ಪು ಮಾಡಿದಾಗ ಅದನ್ನು ಜಾಣ್ಮೆಯಿಂದ ತಿದ್ದಿ ಹೇಳಿ ಉತ್ತಮ ಮಾರ್ಗದರ್ಷಕನಾಗಬೇಕು . ಕೇವಲ ಕೈತುಂಬಾ ದುಡಿದು ಮಕ್ಕಳಿಗೆ ಎಲ್ಲ ಸವಲತ್ತುಗಳನ್ನು ಒದಗಿಸಿ ತನ್ನ ಕರ್ತವ್ಯ ಮುಗಿಯಿತೆಂದು ಕೈ ತೊಳೆದುಕೊಳ್ಳುವ ಅಪ್ಪನಿಗಿಂತ ಮಕ್ಕಳಿಗೆ ನೈತಿಕ ಹಾಗು ಮಾನಸಿಕ ಬಲ ನೀಡುವ ಆದರ್ಶ ತಂದೆ ಬೇಕು .

ತಾಯಿಯ ಸಾಮಿಪ್ಯ ನಮಗೆ ಖುಷಿಯೊಂದಿಗೆ ರಕ್ಷಣಾತ್ಮಕ ಭಾವನೆ ನೀಡಿದರೆ ತಂದೆಯ ಒಡನಾಟ ನಮ್ಮಲ್ಲಿ ಆತ್ಮವಿಶ್ವಾಸ ಚಿಗುರೊಡೆಯುವಂತೆ ಮಾಡುತ್ತದೆ .ಫಲಭರಿತ ನಿರೀಕ್ಷೆಗಳನ್ನು ಹುಟ್ಟುಹಾಕುತ್ತದೆ . ಕೆಲವೊಮ್ಮೆ ಮಗುವಿನ ಪಾಲನೆ ಲಾಲನೆ ಮಾಡುವ ವಿಷಯಕ್ಕೆ ಬಂದರೆ ತಂದೆ ಮತ್ತೊಬ್ಬ ತಾಯಿಯೇ ಆಗುತ್ತಾನೆ .ಆ ಮಗು ಶೈಶವಾವಸ್ಥೆ ಇಂದ ಯವ್ವನಾವಸ್ಥೆಗೆ ತಲುಪುವವರೆಗೂ ಅದರ ಇಷ್ಟಾನಿಷ್ಟಗಳು ,ಸಾಮರ್ಥ್ಯ,ಪ್ರತಿಭೆಗಳು .ಆಸಕ್ತಿ ,ಕನಸುಗಳನ್ನು ಅರಿತುಕೊಂಡು ಪ್ರೋತ್ಸಾಹ ಕೊಟ್ಟು ಕರ್ತವ್ಯವನ್ನು ಮೆರೆದ ಸಾರ್ಥಕ ತಂದೆಯಾಗಬೇಕಾಗುತ್ತದೆ.

ಹೆಣ್ಣುಮಕ್ಕಳಿಗೂ ತಂದೆಗೂ ಏನೋ ಒಂದು ಭಾವನಾತ್ಮಕ ಸಂಭಂಧವಿರುತ್ತದೆ .ತಂದೆ ಎಷ್ಟೋ ಶಿಸ್ತಿನಿಂದಿದ್ದರೂ ಗಂಡು ಮಕ್ಕಳಿಗಿಂತ ಹೆಣ್ಣುಮಕ್ಕಳ ಬಗ್ಗೆ ಅವರಿಗೆ ಸಾಫ್ಟ್ ಕಾರ್ನರ್ ಇರುತ್ತದೆ ಎಂಬುದನ್ನೂ ಯಾರೇ ಆದರು ಒಪ್ಪಲೇಬೇಕು .
ಒಬ್ಬ ತಂದೆ ತಾಯಿಯ ಅನುಪಸ್ಥಿತಿಯಲ್ಲಿ ಹೇಗೆ ಆ ಸ್ಥಾನವನ್ನು ತುಂಬಬಲ್ಲ ಎಂಬುದಕ್ಕೆ ಕಾಳಿದಾಸನ 'ಅಭಿಜ್ಞಾನ ಶಾಕುಂತಲ 'ಉತ್ತಮ ಉದಾಹರಣೆ .ಆ ಮಹತ್ತರ ನಾಟಕದಲ್ಲಿ ೪ ನೆಯ ಅಂಕ ವಿಶ್ವಮಾನ್ಯತೆ ಯನ್ನು ಗಳಿಸಲು ಕಾರಣ ಗೊತ್ತೇ ?ಅಲ್ಲಿ ಕಣ್ವ ಮಹರ್ಷಿ ಗಳು ತಮ್ಮ ಸಾಕು ಮಗಳು ಶಾಕುಂತಲೆಯನ್ನು ದುಷ್ಯಂತನ ಬಳಿ ಕಳುಹಿಸುವಾಗ ಪಿತೃ ಪ್ರೇಮವನ್ನು ಮೆರೆಯುವುದರೊಂದಿಗೆ ತಾಯಿಯಂತೆ ಉಪದೇಶಿಸುತ್ತಾರೆ .ಗಂಡನ ಮನೆಯಲ್ಲಿ ಹೇಗೆ ಸಾರ್ಥಕ ಬದುಕನ್ನು ಸಾಗಿಸಬೇಕೆಮ್ಬುದನ್ನು ತಿಳಿ ಹೇಳುತ್ತಾರೆ .ಇಡಿ ೪ ನೆಯ ಅಂಕ ಅದರಲ್ಲೂ ೪ ನೆಯ ಶ್ಲೋಕ ದಲ್ಲಿ ಒಬ್ಬ ತಂದೆ ತನ್ನ ಮಗಳನ್ನು ಪತಿಗೃಹಕ್ಕೆ ಕಲಿಸುವಾಗ ಪಡುವ ಸಂಕಟ ,ಯಾತನೆಗಳನ್ನು ಪ್ರತಿಬಿಂಬಿಸುವ ಒಬ್ಬ ಜವಾಬ್ಧಾರಿಯುತ ಹಾಗು ವಾತ್ಸಲ್ಯಮಯೀ ತಂದೆಯ ಪಾತ್ರ ಚಿತ್ರಣ ಮಾಡುತ್ತದೆ .

ಭಯವಾದಾಗ ಅಮ್ಮನ ಅಕ್ಕರೆಯ ಮಡಿಲು ,ಪ್ರೀತಿಯ ಅಪ್ಪುಗೆ ,ತಂದೆಯ ವಿಶ್ವಾಸ ಪೂರ್ಣ ಮಾತುಗಳು ನಮ್ಮ ಬದುಕಿನ ದಾರಿ ದೀವಿಗೆ .
ಪೂರ್ಣ ಪಾಲಕತ್ವದ ಮುಖಾಂತರ ಭೇದ ,ಜವಾಬ್ಧಾರಿಗಳನ್ನು ಮೆಟ್ಟಿ ನಿಂತು ಆತ್ಮಾಭಿಮಾನದೊಂದಿಗೆ ತಮ್ಮ ಮಕ್ಕಳಿಗೆ ಪ್ರೀತಿ ನೀಡಿ ಅವರ ಕೌಶಲ್ಯ ಪ್ರತಿಭೆಗಳಿಗೆ ಬೆಲೆ ಕೊಡುವ ತಂದೆ ತಾಯಿಯನ್ನು ಪಡೆದ ಮಕ್ಕಳೇ ನಿಜಕ್ಕೋ ಧನ್ಯರು. ಮಹಾನ್ ಅದೃಷ್ಟವಂತರು .

ಸುಂದರ ಲೋಕದ ಡೊ೦ಕುಗಳು


ನಿನ್ನೆ ರಾತ್ರಿ ನಾನು ಸುಂದರ ನಿದ್ದೆಯಲ್ಲಿದ್ದಾಗ ಇದ್ದಕ್ಕಿದ್ದಂತೆ ಯಾರೋ ನನ್ನನ್ನು "ಮಗು ಎದ್ದೇಳು ಯಾರು ಬಂದಿದ್ದೀನಿ ನೋಡು " ಎಂದು ಹೇಳಿದಂತಾಗಿ ಕಣ್ಣು ಬಿಟ್ಟು ನೋಡುತ್ತೀನಿ !ಬಿಳಿ ಸೀರೆ ತೊಟ್ಟ ,ಹೆಗಲ ಮೇಲೆ ತಲೆಗೂದಲು ಬಿಟ್ಟು ,ಹಲ್ಲುಗಳೇ ಇಲ್ಲದ ಯಾವುದೋ ಮುದುಕಿ ಬಾಯಿ ತುಂಬ ಹ್ಹ ಹ್ಹ ಹ್ಹ ಹ್ಹ ಎಂದು ನಗುತ್ತಿದೆ .ಭಯವಾಗಿ "ಅಮ್ಮಾ "endaರಚೋಣ ಎಂದರೆ ಗಾಬರಿಗೆ ಅದೂ ಸಾಧ್ಯವಾಗುತ್ತಿಲ್ಲ . "ಯಾರು ನೀನು?"ಎಂದು ತಡವರಿಸುತ್ತಾ,ಹಣೆಯ ಮೇಲಿನ ಬೆವರನ್ನು ಒರಿಸುತ್ತ ಕೇಳಿದೆ ."ಸ್ವಲ್ಪ ನೆನಪಿಸಿಕೋ ಮಗು ಶೋಕೇಸಿನಲ್ಲಿ ಇಟ್ಟಿರುವ ನಿಮ್ಮ ತಾತನ ಫೋಟೋವಿನ ಪಕ್ಕದಲ್ಲಿ ಯಾರ ಫಾತೊವಿದೆ ಎಂದು "ಹೀಗೆ ಹೇಳಿತು ಭೂತ . ನಾನು ಯೋಚಿಸಿ "ಅದು ನಮ್ಮಜ್ಜಿಯ ಫೋಟೋ "ಎಂದೆ ."ಅದು ನಾನೇ ಮಗು .ನೀನು ಹುಟ್ಟುವುದಕ್ಕಿಂತ ಮುಂಚಿತವಾಗಿಯೇ ನಾನು ಸ್ವರ್ಗ ಸೇರಿದ್ದರಿಂದ ನಿನಗೆ ನನ್ನ ಮುಖಪರಿಚಯ ಸರಿಯಾಗಿಲ್ಲ ಅಷ್ಟೆ "ಎಂದಾಗ ಗಾಬರಿಯಾಗಿ "ಹಾಗಾದರೆ ನೀನು ಭೂತಾನ ?"ಎಂದೆ "ಇಲ್ಲ ನಾನು ನಿಮ್ಮಜ್ಜಿ "ಎಂದು ನನ್ನ ಪಕ್ಕದಲ್ಲೇ ಕುಳಿತುಕೊಂಡಿತು ಭ್ಹೊತ ಅಲ್ಲ ಕ್ಷಮಿಸಿ ನನ್ನ ಅಜ್ಜಿ . ರಾತ್ರಿಯೆಲ್ಲಾ ನಾನು ಗಡ ಗಡ ,ಆದರು ಸ್ವಲ್ಪ ಧೈರ್ಯ ತೆಗೆದುಕೊಂಡೆ .ಬಹಳ ಒಳ್ಳೆಯ ಅಜ್ಜಿ ಎಂದು ತಿಳಿದ ಮೇಲೆ ಬದುಕಿದ್ದೂ ಭೂತದಂತೆ ಕಾಡುವ ಕೆಲ ಜನರಿಗಿಂತ ಸತ್ತು ಭೂತವಾಗಿರುವ ಅಜ್ಜಿಯೇ ಎಷ್ಟೋ ಮೇಲು ಎಂದೆನೆಸಿ "ಅಜ್ಜಿ ನೀನೇಕೆ ಇಲ್ಲಿಗೆ ಬಂದೆ "ಎಂದು ಕೇಳಿದೆ.ಅದಕ್ಕೆ "ಈಗ ನಮ್ಮ ಊರು ಬಹಳ ಬದಲಾಗಿದೆಯಂತೆ ಸ್ವರ್ಗದಲ್ಲಿ ಮಾತನಾಡಿಕೊಳ್ಳುತ್ತಿದ್ದರು .ಅದಕ್ಕೆ ನೋಡಬೇಕೆಂದು ಬಂದೆ ನನಗೆ ಬೆಳಿಗ್ಗೆ ಊರನ್ನೆಲ್ಲ ತೋರಿಸ್ತಿಯ "ಎಂದು ಕೇಳಿಕೊಂಡಿತು ಭೂತ ಅಲ್ಲ ಅಜ್ಜಿ ಅಲ್ಲ ಅಯ್ಯೋ ಒಟ್ಟಿನಲ್ಲಿ ಭೂತಜ್ಜಿ . ಮಾರನೆಯ ದಿನ ಬೆಳಿಗ್ಗೆ ಅಜ್ಜಿಯನ್ನು ವಾಕಿಂಗ್ ಕರೆದುಕೊಂಡು ಆಚೆಗೆ ಹೊರೆಟೆ.ಅಲ್ಲೇ ಪಾರ್ಕಿನಲ್ಲೇ ಕಲ್ಲು ಬೆಂಚಿನ ಮೇಲೆ ಕುಳಿತುಕೊಂಡು ಅಜ್ಜಿ ಸುಧಾರಿಸಿ ಕೊಳ್ಳುತ್ತಿದ್ದರು ಸ್ವಲ್ಪ ಸಮಯದ ನಂತರ "ಮಗು ಅಲ್ನೋಡು ಪಾಪ!ಎಷ್ಟು ಚಿಕ್ಕ ವಯಸ್ಸು ,ನೋಡಕ್ಕೂ ಚೆನ್ನಾಗಿದ್ದಾನೆ .ಶ್ರೀಮಂತರ ಮನೆ ಹುಡುಗ ಅಂತ ಕಾಣತ್ತೆ .ಕೋಟು ,ಗೀಟು ಹಾಕ್ಕೊಂಡು ಕೂತಿದ್ದಾನೆ .ಆದರೆ ತನ್ನಷ್ಟಕ್ಕೆ ತಾನೆ ನಗ್ತಾನೆ ಸ್ವಲ್ಪ ಸಮಯ ತಾನೊಬ್ಬನೇ ಮಾತ್ನಾದಿಕೊಲ್ಲುತ್ತಾನೆ .ಇದ್ದಕ್ಕಿದ್ದ ಹಾಗೆ ಗಂಭೀರವಾಗಿ ಹೋಗ್ತಾನೆ .ಪಾಪ ತಲೆ ಕೆಟ್ಟಿದೆ ಎಂದು ಕಾಣತ್ತೆ .ಮನೆಯವರ ಕಣ್ಣು ತಪ್ಪಿಸಿ ಒಬ್ಬನೇ ಪಾರ್ಕಿಗೆ ಬಂದು ಬಿಟ್ಟಿದ್ದಾನೆ "ಎಂದು ಒಂದೇ ಉಸಿರಿಗೆ ಹೇಳುತ್ತಾ ಅತ್ತ ಕಡೆ ತೋರಿಸಿದಾಗ ನನಗೆ ತಡೆಯಲಾರದಷ್ಟು ನಗು ಬಂತು ."ಅಜ್ಜಿ ಅವನಿಗೆ ಹುಚ್ಚೂ ಇಲ್ಲ ಬೆಪ್ಪೂ ಇಲ್ಲ .ಅವನು ಮೊಬೈಲ್ ಫೋನ್ನಲ್ಲಿ ಮಾತನಾಡ್ತಾ ಇದ್ದಾನೆ.ಕಿವಿಗೆ ಇಯರ್ ಫೋನೇ ಸಿಕ್ಕಿಸಿಕೊಂಡು ಬಿಟ್ಟರೆ ಸಾಕು ,ಗಾಡಿಯ ಮೇಲೆ ಕುಳಿತಿರಲಿರಸ್ತೆಯಲ್ಲಿ ನಡೆಯುತ್ತಿರಲಿ ಆರಾಮವಾಗಿ ಮಾತನಾಡಬಹುದು .ಅಯ್ಯೋ ಅಜ್ಜಿ ನೀನು ಭೂಮಿಯ ಮೇಲೆ ಇದ್ದಾಗ ಫೋನನ್ನೇ ನೋಡಿಲ್ಲ ಬಿಡು .ಈಗ ಸಧ್ಯದಲ್ಲೇ ಎಂಪಿತ್ರಿ ಎಂಬ ತಲೆಗೆ ಕಟ್ಟಿಕೊಳ್ಳುವ ವಾಟರ್ ಪ್ರೂಫ್ ಮೊಬೈಲ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡ್ತಾರಂತೆ .ಇದರಿಂದ ಇನ್ನು ಮುಂದೆ ಸ್ನಾನ ಮಾಡುವಾಗಲು ಮೊಬೈಲ್ ಅನ್ನು ಬಳಸಬಹುದು ಗೊತ್ತಾಯ್ತ "ಎಂದೆ ಪಾಪ ಬಡಪಾಯಿ ಅಜ್ಜಿಗೆ ಏನೂ ಅರ್ಥವಾಗಲಿಲ್ಲ . ಅಷ್ಟೊತ್ತಿಗೆ ಗಂಟೆ ಆಗಿತ್ತು .ಅಜ್ಜಿಗೆ ಬೆಂಗಳೂರಿನ ಬಿಗೆದ್ ರೋಡ್ . ಎಂ ಜಿ ರೋಡ್ ಗಳನ್ನೂ ತೋರಿಸಬೇಕೆನಿಸಿ ಕರೆದೊಯ್ದೆ .ನಮ್ಮಜ್ಜಿಗೆ ಬಹಳ ದಿನಗಳ ಮೇಲೆ ಭೂಲೋಕವನ್ನು ನೋದುತಿದ್ದೆನಲ್ಲ ಎಂದು ಸಂಭ್ರಮವೋ ಸಂಭ್ರಮ. ರಸ್ತೆಯಲ್ಲಿ ಅಗತ್ಯಕ್ಕಿಂತ ಹೆಚ್ಚಿನದ್ದಾಗಿ ತುಂಬಿ ತುಳುಕಾಡುತ್ತಿದ್ದ ಜನರು ,ನಾಯಿ ,ದನಗಳು,ವೆಹಿಕಲ್ ಗಳು ಇವುಗಳಿಂದ ನಮ್ಮ ಭೂತಜ್ಜಿಗೆನು ತೊಂದರೆ ಆಗಲಿಲ್ಲ .ಏಕೆಂದರೆ ಅವರು ನನ್ನೋಬ್ಬಲಿಗೆ ಬಿಟ್ಟು ಮತ್ತಿನ್ಯಾರಿಗೂ ಕಾಣುತ್ತಲೇ ಇರಲಿಲ್ಲ ಆದರೆ ನಡೆಯಲು ತೊಂದರೆ ಆಗುತ್ತಿದ್ದುದ್ದು ದೇಹವಿದ್ದ ನನಗೆ ಅಷ್ಟೆ ಅಷ್ಟರಲ್ಲೇ ನಮ್ಮ ಅಜ್ಜಿಯ ಕಣ್ಣು ಅಲ್ಲೇ ತುಳುಕಿ ,ಬಳುಕಿ ,ಕುಲುಕಿ ನಡೆಯುತ್ತಾ ಎಡ ಹೆಗಲಿನ ಮೇಲೆ ಮೋಟು ವ್ಯಾನಿಟಿ ಬ್ಯಾಗು ನೇತು ಹಾಕಿ ,ಬಲಗೈಯಲ್ಲಿ ಕೆನ್ಚಾದ ತಲೆ ಕೂದಲು ನೇವರಿಸುತ್ತ , ಮೊಬೈಲಿನಲ್ಲಿ ಸ್ಟೈಲ್ ಆಗಿ ಇಂಗ್ಲಿಷು ಮಾತನಾಡುತ್ತ ,ಮೊಣಕಾಲಿನ ಮೇಲೆ ಮೋಟು ಲಂಗ ಧರಿಸಿ ನಡೆಯುತ್ತಿದ್ದ ಲಳನಾಮನಿಯರ ಕಡೆಗೆ ಹರಿದು "ಮಗು ಅಲ್ಲಿ ನೋಡು ಹುಡುಗಿಯರೆಲ್ಲ ಬಿಗಿಯಾದ ,ಮೈಗಂಟಿದ ಬಟ್ಟೆಗಳನ್ನು ತೊಟ್ಟು ದೇಹದ ಉಬ್ಬು ತಗ್ಗುಗಳನ್ನು ತೋರುವ ಮಟ್ಟಕ್ಕೆ ಇಳಿದಿದ್ದಾರೆ ನಿಮ್ಮ ಊರಿನ ಜನರಿಗೆ ಬಟ್ಟೆಗೆ ಬರ ಬಂದಿದೆಯ ?"ಎಂದು ಮುಗ್ಧವಾಗಿ ಕೇಳಿದರು ." ಅಯ್ಯೋ ಇದು ಫ್ಯಾಶನ್ ಪರಮಾವಧಿ ಅಜ್ಜಿ !ಅವರೆಲ್ಲ , sಹ್ರೀಮಂತರ ಮಕ್ಕಳು .ಅವರಿಗೆ ಬಟ್ಟೆ ಕೊಂಡುಕೊಳ್ಳುವುದಕ್ಕೆ ಯಾವ ಸಮಸ್ಯೆನೂ ಇಲ್ಲ "ಎಂದೆ . ತಕ್ಷಣವೇ ಭೂತಜ್ಜಿ ಮತ್ತೊಬ್ಬರನ್ನು ತೋರಿಸಿ "ನೋಡು ಅಲ್ಲಿ ಬರುತ್ತಿರುವ ಹುಡುಗಿಯ ತಲೆಗೂದಲು ಸ್ವಲ್ಪ ಬಿಳುಪು ಸ್ವಲ್ಪ ಕೆನ್ಚಾಗಿ ಎಣ್ಣೆ ಕಾಣದ ಹಾಗಿದೆ . ಒಳ್ಳೆಯ ಆಹಾರ ತಿನ್ನೋದಿಲ್ಲ ಅಂತ ಕಾಣತ್ತೆ .ಬಾಲನೆರೆ ಬಂದಿರಬೇಕು .ಇದಕ್ಕೆ ಕರಿಬೇವಿನಸೊಪ್ಪು ,ಹೊನಗೊನೆ ಸೊಪ್ಪು ಇವುಗಳನ್ನು ತಿನ್ನಬೇಕು .ಆಗ ಖನಿಜಾಂಶ , ಕಬ್ಬಿಣಾಂಶ ಹೆಚ್ಚಾಗಿ ಕೂದಲು ಕಪ್ಪಾಗತ್ತೆ. ನೀನು ಹೀಗೆ ನಿನ್ನ ಕೂದಲನ್ನು ಹಾಳು ಮಾಡ್ಕೋಬೇಡ ಇವನ್ನೆಲ್ಲಾ ಚೆನ್ನಾಗಿ ತಿನ್ನು" ಎಂದಾಗ

"ಅಯ್ಯೋ ಅಜ್ಜಿ ಅವರಿಗೆ ಯಾವ ವಿಟಮಿನ್ ಗಳ ಕೊರತೇನು ಇಲ್ಲ. ರೀತಿ ಬ್ಯೂಟಿ ಪಾರ್ಲರ್ ಗೆ ಹೋಗಿ ಅವರೇಮಾಡಿಸಿಕೊಂಡು ಬರ್ತಾರೆ. ಇದನ್ನು ಹೇರ್ ಕಲರಿಂಗ್ ಅಂತಾರೆ" ಎಂದೆ. "ಅಬ್ಬಾ ಇದೇನು ಕಾಲವಪ್ಪ. ಚೆನ್ನಾಗಿರೋದನ್ನು ನಾವೇ ದುಡ್ಡು ಕೊಟ್ಟು ಕೆಡಸಿಕೊಂಡು ಬರುವುದಾ?" ಎಂದು ಅಜ್ಜಿ ಗೊನಗತ್ತಿದರು

ನನಗೂ ಆ ಸಮಯದಲ್ಲಿ ರಸಿಕ ಕವಿವರ್ಯರ ನೆನಪಾಯ್ತು, ಸುಂದರವಾದ ಕಪ್ಪು ಕೇಶರಾಶಿಯನ್ನು ನೋಡಿ ಆಕರ್ಷಿತರಾಗಿ ನೀಲ (ಕಪ್ಪು) ವೇಣಿ, ನಿಳಕೆಷಿ ಎಂದೆಲ್ಲ ವರ್ಣಿಸಿ ಬರೆದ ಕಾವ್ಯ, ಕೃತಿ ಗಳೆಲ್ಲ ಔಟ್ ಡೇಟೆಡ್ ಆಗಿ ಹೋಯ್ತಲ್ಲ .ಇನ್ನು ಮುಂದೆ ಈ ಹೇರ್ ಕಲರಿಂಗ್ ಚಳುವೆಯರನ್ನು ನೋಡಿ ಬಿಳಿ ವೇಣಿ ,ಕೆಂಚು ವೇಣಿ ಎಂದೆಲ್ಲ ವರ್ನಿಸಬೇಕಾಗುತ್ತದಲ್ಲ ಎಂದು ಚಿಂತೆಯಾಯ್ತು .

ತಲೆಗೂದಲು ಬಿಳುಪಾಗಿದೆಯೇ ,ಬಾಲನೆರೆಯೇ ,ಬೋಕ್ಕತಲೆಯೇ ತಕ್ಷಣವೇ ಸಂಪರ್ಕಿಸಿ ಎಂಬ ಜಾಹೀರಾತುಗಳನ್ನೂ ನೀಡುತ್ತಾ ಸಂಪಾದನೆ ಮಾಡುತ್ತಿದ್ದ ಕಂಪನಿ ಗಳ ಭವಿಷ್ಯ ಮುಂದೆ ಏನಪ್ಪಾ ?ಎಂದು ಆತಂಕವಾಯಿತು .

ಅಂತೂ ಇಂತೂ ಒಂದು ದಿನದಲ್ಲೇ ಅಜ್ಜಿಗೆ ಇಡೀ ಊರಿನ ದರ್ಶನ ಮಾಡಿ ಬದಲಾದ ಊರು ,ಜನರನ್ನು ನೋಡಿ ಗಾಬರಿಯಾಗಿದ್ದರು .ವಯಸ್ಸಾಗುತ್ತಿದ್ದಂತೆ ಉಂಟಾಗುವ ಸುಕ್ಕನ್ನು ಹೋಗಿಸಲು "ಫೇಸ್ ಲಿಫ್ಟಿಂಗ್ ",ತಮ್ಮ ಸುಂದರವಾದ ನೀಳ ಕೆಶರಾಶಿಗೆ ಕತ್ತರಿ ಹಾಕಿ ಮೊಂಡು ಮಾಡಿಸಿ ತಾವೇ ದುಡ್ಡು ತೆತ್ತು ಕಪ್ಪು ಕೇಶವನ್ನು ಕೆಂಚು ,ಬಿಳಿ ಮಾಡಿಸುವ ಹೇರ್ 'ಕಲರಿಂಗ್',ನೆಟ್ಟಗಿರುವ ದಂತಗಳನ್ನು ಫ್ಯಾಷನ್ ಹೆಸರಿನಲ್ಲಿ ವಕ್ರವಾಗಿಸುವ 'ಟೂತ್ ಫಿಟ್ಟಿಂಗ್ ',ದೇಹದ ತುಂಬೆಲ್ಲ ಹಚ್ಹ್ಚೆಹಾಕಿಸಿಕೊಳ್ಳುವ 'ಟ್ಯಾಟೂ ಪೆಸ್ತಿಂಗ್, ಮೂಗುಗಲಿಗೆನೋ ಸರಿ ಆದರೆ ನಾಲಿಗೆ ,ತುಟಿ ,ಹುಬ್ಬು ,ಹೊಕ್ಕಳಿಗೆಲ್ಲ ಓಲೆಗಳನ್ನು ಚಿಚ್ಚಿಸಿಕೊಂಡು ಸಂಭ್ರಮಿಸುವ 'ಆರ್ನಮೆಂಟ್ ಪ್ರಿಕ್ಕಿಂಗ್ ', ಕೋಮಲವಾದ ಕಪ್ಪು ಮೋಹಕ ಕಂಗಳಿಗೆ ಬೆಕ್ಕು ,ನಾಯಿಗಳ ಕನ್ನಿನತಹ ಕಲರ್ ಕಲರ್ 'ಲೆನ್ಸ್ ಗಳ ಫಿಕ್ಸಿಂಗ್',ದಷ್ಟ ಪುಷ್ಟ ವಾದ ದೇಹಕ್ಕೆ ಸೌಂದರ್ಯದ ಹೆಸರಿನಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿಯೇ ಕಸರತ್ತು ಕೊಟ್ಟು ,ಪೌಷ್ಟಿಕ ಆಹಾರವೂ ಇಲ್ಲದೆ ಒಣಗಿದ ಲತೆಯಂತೆ ಮಾಡುವ 'ಫುಡ್ ದಯೇತಿಂಗ್ ',೨೪ ಗಂಟೆಯೂ ಹೆಂಡ ಕುಡಿದ ಮಂಗನಂತೆ ಒಂದೆಡೆ ನಿಲ್ಲದೆ ಕೂರದೆ ಸದಾ ಕಂಪ್ಯೂಟರ್ನಲ್ಲಿ 'ಈ ಮೇಲ್ ಚೆಕ್ಕಿಂಗ್ ','ಮೊಬೈಲಿನಲ್ಲಿ ಚಾಟಿಂಗ್ ',ಅಡುಗೆ ಮಾಡಲೂ ಸಮಯವಿಲ್ಲದೆ ಅಥವಾ ಮನಸಿಲ್ಲದೇ ಹೋಟೆಲ್ಗಳಲ್ಲಿ ,ಬೀದಿಯ ಮೊಬೈಲ್ ಕ್ಯಾಂಟೀನ್ ಗಳಲ್ಲಿ 'ಈಟಿಂಗ್ 'ಮನೆಗೂ ಅದನ್ನೇ 'ಪ್ಯಾಕಿಂಗ್ 'ಈ ರೀತಿಯ ಸೊ ಕಾಲ್ಡ್ ಸೊಸೈಟಿಯ ಫಾಸ್ಟ್ ಮೂವಿಂಗ್ ,ರನ್ನಿಂಗ್ಗಳನ್ನೂ ದಾರಿಯುದ್ದಕ್ಕೂ ನೋಡಿ ಕಣ್ಣರಳಿಸಿ ,ನಿಬ್ಬೆರಗಾದ ನಮ್ಮ ಭೂತಜ್ಜಿಯ ಸಂಕಟ ಮಾತ್ರ ಹೇಳತೀರದು .
"ಅಜ್ಜಿ ವಯಸ್ಸು ಏರುತ್ತಿದ್ದಂತೆ ದೇಹಕ್ಕೋ ರಿಪೆರಿಗಳು ,ಸೌಂದರ್ಯ ಚಿಕಿತ್ಸೆಗಳು ಹೆಚ್ಚಾಗುತ್ತವೆ .ಹುಣಸೆ ಮರಕ್ಕೆ ಮುಪ್ಪು ಬಂದರೇನು ?ಹುಳಿ ಕಡಿಮೆ ಯಾದೀತೆ ?ಎನ್ನುವ ಹಾಗೆ ಇತ್ತೀಚಿಗೆ ವಿದೇಶದಲ್ಲಿ ವಯಸ್ಸಾದ ಮುದುಕ ಮುದುಕಿಯರಿಗೂ ಫ್ಯಾಷನ್ ಪ್ರಪಂಚದ ಗಂಧ ಬಡಿದು ಅವರಿಗೂ ಸೌಂದರ್ಯ ಸ್ಪರ್ಧೆ ಏರ್ಪಾಡಾಗಿದೆಯಂತೆ .ಅಜ್ಜೀ ನೀನು ಸುಂದರವಾಗಿಯೇ ಇದ್ದೀಯ ಆದರೆ ನೀನು ನನ್ನ ಕಣ್ಣಿಗೆ ಕಾಣುವಂತೆ ಎಲ್ಲರಿಗೂ ಕಾನುವನ್ತಿದ್ದರೆ ನೀನು ಇದಕ್ಕೆ ಪ್ರಯತ್ನಿಸಬಹುದಿತ್ತಲ್ಲವೇ .ಚ್ಚೇ!ಎಂತಹ ಗ್ರೇಟ್ ಮಿಸ್ "ಎಂದು ಸುಮ್ಮನೆ ಚೇಡಿಸಿದಾಗ ಸ್ವಲ್ಪ ನಾಚಿಕೆ ಮತ್ತು ಸ್ವಲ್ಪ ಕೋಪದಿಂದ ಬೇಡಪ್ಪ ಬೇಡ ಕಾಲ ಕೆಟ್ಟುಹೋಗಿದೆ ಸೌಂದರ್ಯ ಸ್ಪರ್ಧೆನೂ ಬೇಡ ,ಹೀಗೆ ಗರಬಡಿದವರ ರೀತಿಯಲ್ಲಿ ವರ್ತಿಸುವುದೂ ಬೇಡ .ಈ ಸುಂದರ ಲೋಕದಲ್ಲಿ ಎಲ್ಲವೂ ಡೊಂಕೆ !ನಾನು ಈ ಭೂಲೋಕಕ್ಕೆ ಬಂದಿದ್ದೆ ತಪ್ಪಾಯಿತು .ಸಾಕಮ್ಮ ಸಾಕು ,ನಾನು ಎಲ್ಲಿಂದ ಬಂದೆನೋ ಅಲ್ಲಿಗೆ ಹೋಗ್ತೀನಿ ಎಂದು ಟಾಟ ಮಾಡಿ ಮಾಯವಾಗಿಯೇ ಬಿಟ್ಟರು .ಅಜ್ಜೀ ಅಜ್ಜೀ ನಿಲ್ಲು .ಒಂದೇ ದಿನಕ್ಕೆ ಈ ಆಧುನಿಕ ಲೋಕ ಬೇಜಾರಾಗಿ ಹೋಯ್ತಾ ?ಹೋಗದಿರು ಎಂದು ಕಿರುಚುತ್ತ ,ಅರಚುತ್ತ ಓದಲು ಪ್ರಯತ್ನಿಸುತ್ತಿದ್ದಂತೆ ಇದ್ದಕ್ಕಿದ್ದಂತೆ ಮೇಲಿನಿಂದ ಬಿದ್ದಂತಾಯಿತು .ಸೊಂಟ ಮುರಿಯಿತು .ಅಮಾ ಎಂದು ಅರಚಿದೆ .ಕಣ್ಣು ಬಿಟ್ಟು ನೋಡಿದೆ . ಮನೆಯವರೆಲ್ಲ ನನ್ನ ಕೋಣೆಯಲ್ಲಿ ಬಂದು ನಿತಿದ್ದರು .ನಂತರ ತಿಳಿಯಿತು ಅದು ಕನಸು .