Sunday, March 8, 2009

ಸ್ನೇಹದಾಟ

ನಮ್ಬಿದನಲ್ಲೇ ಗೆಳತಿ! ಆ ನಿನ್ನ ಆತ್ಮೀಯ ನುಡಿ

ಪ್ರೀತಿಯ ನೋಟ ,ಒಲುಮೆಯ ಕೆಲದಿನಗಳ ಸಖ್ಯ ,

ಥಳಥಳನೆ ಹೊಳೆವ ಮೊಗದಲ್ಲಿನ ಸ್ವಚ್ಚ

ನೀಲಿಬಾನಿನಂದದ ಮುಗ್ಧನಗುವ ಕಂಡಾಗ !

ಗೌರವಿಸಿದನಲ್ಲೇ ಗೆಳತಿ !ಕುಂಕುಮ ಸೌಭಾಗ್ಯವತಿಯೆಂದು

ಕೊರಳೇರಿಸಿದ ತಾಳಿ ,ಮೈಪೂರ ಗಮ್ಭೀರಡಿ ಹೊದ್ದ ಸೆರಗು ,

ಲಲಾಟಡಿ ಹೊಳೆವ ಸಿಂಧೂರ , ಮನದ ಉತ್ಸಾಹ ಹುರುಪು

ಜೀವಂತಿಕೆಗೆ ನಾ ತಲೆ ಬಾಗಿಸಿದಾಗ !

ಛೆ................... ಛೆ.......................... ಛೆ................ ನೋವಾಯಿತಲ್ಲೇ

ತುಂಬು ಹುನ್ನಿಮೆತ ಕ್ಷೀರೋದ್ಭವ ಸೋಮನ ರಕ್ಕಸ ನುಂಗಿದಂತೆ ,

ರಾಶಿ ರಾಶಿ ತಾರೆಗಳು ಒಮ್ಮೆಗೇ ಕತ್ತರಿಸಿ

ಧರೆಗುರುಲಿದಂತೆ ನೀ ಎನ್ನ ವಿಶ್ವಾಸಕ್ಕೆ ತಣ್ನೀರೆರಚಿದಾಗ !

ದಿಕ್ಕಪಾಲಾಯಿತಲ್ಲೇ ನಿನ್ನ ಬಗೆಗಿನ ಗೌರವ ಕಂಡ

ವಿಶಾಲ ಕಡಲು ಕ್ಷಣ ಮಾತ್ರದಲ್ಲೇ ಆಪೋಶನೆಯಾದಂತೆ,

ರೆಪ್ಪೆಯ ಒಂದೇ ಬಡಿತದಲ್ಲೇ ನೀ

ಎನ್ನ ಹಣ ಕದ್ದೆಯೆಂದು ಧೃಡ ಪಟ್ಟಾಗ!

ಗೆಳತಿ ತಿಳಿಯಿತೀಗ ನೀನೊಂದು ಹತ್ತಿಯ ಹಣ್ಣು .

ಹೊರಗೆ ಥಳುಕು ಒಳಗೆ ಹುಳುಕು !ನಮ್ಮ ಸ್ನೇಹ ಬಂಧನಕ್ಕೆ

ವಿಷದಾರವ ನಗು ನಗುತ್ತಲೇ ಕಟ್ಟಿ ನಿನ್ನ ವಂಚನೆ ,

ದೋಚುವಾಟಕ್ಕೆ ಈ ಸ್ನೇಹವ ಅದವಿತ್ತೆಯಲ್ಲೇ

ನೀ ಮೋಸದ ಗೆಳತಿ !!!

No comments:

Post a Comment