
ಕೆಲವು ದಿನಗಳ ಹಿಂದೆ ಸುಮಾರು ೪೫ ವರ್ಷದ ವ್ಯಕ್ತಿಯೊಬ್ಬ ನಮ್ಮ ಕಾಲೇಜಿಗೆ ಬಂದು ,ತನಗೆ ಕ್ಷಯರೋಗವಿದೆಯೆಂದು (ವೈದ್ಯರು ಬರೆದು ಕೊಟ್ಟಿದ್ದ ಔಷಧಿಯ ಚೀಟಿಯೊಂದನ್ನು ತೋರಿಸಿ )ಹೇಳಿದಾಗ ನಮ್ಮ ಕೈಲಾದಷ್ಟು ಸಹಾಯ ಮಾಡಿದೆವು .ತರಗತಿಗಳಲ್ಲೂ ಬಹಳಷ್ಟು ಹಣ ಸಂಗ್ರಹಣೆ ಮಾಡಿಕೊಂಡು ಆ ವ್ಯಕ್ತಿ ಹೊರಟುಹೋದ .ಇದಾದ ಸುಮಾರು ಒಂದು ವಾರಕ್ಕೆ ಮತ್ತೆ ಅದೇ ವ್ಯಕ್ತಿ ಬೇರೊಂದು ಆಸ್ಪತ್ರೆಯ ವೈದ್ಯರು ಕೊಟ್ಟಿದ್ದ ಔಷಧಿಯ ಚೀಟಿಯನ್ನು ತೋರಿಸುತ್ತ "ನನ್ನ ಹೆಂಡತಿಗೆ ಹೃದಯದ ಖಾಯಿಲೆಯಿದೆ ,ನೀವು ಸಹಾಯ ಮಾಡಬೇಕು "ಎಂದು ಅಂಗಲಾಚಿದ .ನಮಗೆ ಅನುಮಾನ ಬಂತಾದರೂ ದೇಹಿ ಎಂದವರಿಗೆ ನಾಸ್ತಿ ಎಂದು ಹೇಳಬಾರದೆಂದು ಅವನಿಗೆ ಸಹಾಯ ಮಾಡಿದೆವು
ಇದಾದ ೧೫ ದಿನಕ್ಕೆ ಮತ್ತೆ ಅದೇ ವ್ಯಕ್ತಿ ಹಾಜರಾದ !ನನ್ನ ಮಗಳಿಗೆ ಮೂತ್ರಪಿಂಡದ ವ್ಯಫಲ್ಯವಿದೆ ನನಗೆ ಧನ ಸಹಾಯ ಮಾಡಬೇಕು ಎಂದಾಗಿತ್ತು ಅವನ ಈ ಸಲದ ಮನವಿ .
ಎರಡು ಸಲ ಸಹಾಯ ಮಾಡಿದ್ದ ಕೆಲವು ಹುಡುಗರು ಈಗ ಜಾಗೃತರಾದರು .ಅವನಿಗೆ ಬುದ್ದಿ ಹೇಳಲು ಮುಂದಾದಾಗ ಆ ವ್ಯಕ್ತಿಯೇ ಅವಾಚ್ಯವಾಗಿ ಬಯ್ಯಲು ತೊದಗಬೇಕೆ ?
ಕೊನೆಗೆ ಪೊಲೀಸರಿಗೆ ಹಿಡಿದು ಕೊಡುವುದಾಗಿ ಬೆದರಿಸಿದಾಗ ಅವನು ಅಲ್ಲಿಂದ ಪರಾರಿಯಾದ .
ಜನರನ್ನು ಈ ರೀತಿ ಮೋಸ ಮಾಡುವುದೇ ಆ ವ್ಯಕ್ತಿಯ ಕಸುಬಾಗಿರಬಹುದು .ಆದರೆ ಪ್ರತಿಷ್ಟಿತ ಆಸ್ಪತ್ರೆಗಳ ವೈದ್ಯರು ಅದು ಹೇಗೆ ಅವನಿಗೆ ಬೇರೆ ಬೇರೆ ಕಾಯಿಲೆಗಳ ಚೀಟಿ ಬರೆದು ಕೊಡುತ್ತಾರೆ ? ಅಥವಾ ಅವನೇ ಇಂಥ ಔಷಧಿ ಚೀಟಿಗಳನ್ನು ಬೇರೆ ರೋಗಿಗಳಿಂದ ಕದ್ದಿರಬಹುದೇ ? ಅಂತೂ ಅವನು ವಿದ್ಯಾರ್ಥಿಗಳ ಔದಾರ್ಯವನ್ನೇ ಬಂಡವಾಳ ಮಾಡಿಕೊಂಡ!
enri madam bari aparoopa vagi blog update madidira??
ReplyDeleteMadamnorige nannadoo ide pratikriye...
ReplyDeleteAbhimaanigalige niraashe aaguttappa idrinda...allavaa?
ಈ ಸರ್ತಿ ಬಂದರೆ ಅವನ ಮೂತ್ರ ಪಿಂಡ ತೆಗ್ಸಿ ದಾನ ಕೊಟ್ ಬಿಡಿ ಯಾವ್ದಾದ್ರೂ ಸೇವಾರ್ಥ ಸಹಾಯ ಮಾಡುವ ಆಸ್ಪತ್ರೆಗೆ..!! ಆಗ್ಲೆ ಇಮ್ಥವರಿಗೆ ಬುದ್ಧಿ ಬರೊದು..ಅಲ್ಲ ಇಂಥವರಿಂದ ನಿಜವಾಗಿಯೂ ತೊಂದರೆ ಇರೋರಿಗೆ ಸಹಾಯ ಮಾಡೋಕೆ ಕನ ಹಿಂಜರೀತಾರೆ...
nanna prakara avrna hidkon buddi kalisdre darig bartare
ReplyDeleteಚನ್ನಾಗಿದೆ...! ಯಾರನ್ನು ನಂಬೋ ಹಾಗಿಲ್ಲ ಬಿಡಿ
ReplyDeleteTumba Chennagide Akka
ReplyDeletei like your writing
ReplyDelete