
ಮರೆಯಲೆಂತು ಆದದ್ದೆಲ್ಲವ ?
ಚಿರಕಾಲವೀ ನೆನಹುಗಳು .ಪಾರ್ಥನ
ಇಟ್ಟ ಗುರಿ ,ಬಿಟ್ಟ ಬಾಣದಂತೆ
ನೇರ ಹೃದಯವ ಛೇದಿಸುವುದು .
ಕಳೆದ ನಿನ್ನೆಗಳ ಕಹಿ ನೆನಹುಗಳಿಗೇಕೆ
ನನ್ನಿಂತು ಕಾಡಿ ಪೀಡಿಸುವ ಚಪಲ?
ಇಲ್ಲ ಸಲ್ಲದ ನೆಪಹೊತ್ತು ಕರೆಯದ
ಅತಿಥಿಯಂತೆ ಬಂದೇಕೆ ಸುಳಿದುಹೋಗುವುದು?
ಬೆಂಬಿಡದೆ ಕಾಡಿ ಹುಚ್ಚೆದ್ದು ಕುಣಿವ ಈ ಪರಿಗೆ
ಬೇಸೆತ್ತು,ಮುನಿದು ಕೋಪ ಕಾರಿದರೆ
ಅಡಗಿ ಮತ್ತೇಕೆ ನುಸುಳಿ ಕಾಯ ಬಿಚ್ಚಿ
ಎದೆ ಮೇಲೆ ಕಾಲಿಟ್ಟು ಗಹ ಗಹಿಸಿ ನಗುವುದು ?
ಬಿಟ್ಟು ಹೋದ ಸಂಬಂಧಗಳ ಮೂಹಪಾಶದಿ ಬಳಸಿ ,
ತಲ್ಲಣಗಳ ವ್ರುಧ್ಧಿಸಿ ,ಶಾಂತತೆಯ ಕದಡಿ ,
ಅಳುವ ಅರಳಿಸಿ ,ನಗುವ ಮುದುಡಿಸಿ
ಸಂಭ್ರಮಿಸುತ ದಾಹವನ್ನೇಕೆ ತಣಿಸಿಕೊಳ್ಳುವುದು?
ಬೇಡ !!! ಪೀಡಿಸದಿರು ನೆನಪೇ ........................
ಎನ್ನ ಕಾಡುವ ನಿನ್ನ ಸಾಂಗತ್ಯಕ್ಕೆ ಕುಣಿಕೆ ಏರಿಸಿ
ಅಂತ್ಯ ಮಾಡಿ ಅಂದೇ ಶ್ರದ್ಧಾಂಜಲಿಯ ಅರ್ಪಿಸಿದೆ
ಆದರೂ ........ಆದರೂ................
ಮತ್ತೆ ಬಂದಿರುವೆಯಲ್ಲ
ವಂಡರ್ ಅನಿಸುತ್ತದೆ ಕವಿತೆ ಓದಿದ ಮೇಲೆ
ReplyDeleteಯಾಕೋ ಗೋತ್ತಿಲ!!
ದಿವ್ಯ
ReplyDeleteತುಂಬ ಚೆನ್ನಾಗಿ ಇದೆ ಈ ನೆನಪಿನ ಬಗ್ಗೆ ಕವನ,,,,
ಗುರು
tumba chennagide nenapu entha kayra maduttadalla endu enisuttade. tukaram naik
ReplyDeleteಯಾನೋ ಹುಡುಕುತ್ತ ನಿಮ್ಮ ಬ್ಲಾಗ್ ನೋಡಿದೆ. ಈ ಕವನ ತುಂಬಾ ಚೆನ್ನಾಗಿದೆ ಮೇಡಂ, ಪ್ರಾರಂಭ ಮತ್ತು ಅಂತ್ಯ ಎಲ್ಲವೂ. ನೆನಪುಗಳು ಮತ್ತು ಕವನ ಹಾಗೂ ಲೇಖನಗಳನ್ನು ಇಲ್ಲಿ ಚೆನ್ನಾಗಿ ದಾಖಲಿಸಬಹುದು. ಆದರೆ ಬ್ಲಾಗ್ ಅಪ್ಡೇಟ್ ಆಗಬೇಕು ಇನೂ ಆಕರ್ಷಣೀಯವಾಗಿ. ಅಪಡೇಟ್ ಮಾಡುವಲ್ಲಿ ಸಮಸ್ಯಗಳಿದ್ದರೆ ಹೇಳಿ.
ReplyDeleteಸಂಭ್ರಮಿಸುತ ದಾಹವನ್ನೇಕೆ ತಣಿಸಿಕೊಳ್ಳುವುದು?
ReplyDeleteಬೇಡ !!! ಪೀಡಿಸದಿರು ನೆನಪೇ ..................
ದಿವ್ಯಾ..ನೆನಪುಗಳು ಕಾಡುತ್ತವೆ..ಎನ್ನುವುದಕ್ಕಿಂತ ಪೀಡಿಸುತ್ತವೆ ಎನ್ನುವುದು ಎಂತಹ ತೀಕ್ಷ್ಣತೆಯನ್ನು ನಿವೇದಿಸುತ್ತದೆ ಎನ್ನುವುದು ನಿಮ್ಮ ಈ ಸಾಲುಗಳಲ್ಲಿ ಸೂಚ್ಯವಾಗಿ ಬಂದಿವೆ. ಚನ್ನಾಗಿದೆ ಬರವಣಿಗೆ, ನನ್ನ ಬ್ಲಾಗು ಮಿತ್ರರಲ್ಲಿ ಎರಡ್ನೇ ದಿವ್ಯಾ ನೀವು...ಬನ್ನಿ ನನ್ನ ಗೂಡಿನತ್ತ ಬಿಡುವಾಗಿ ಒಮ್ಮೆ...
ಕವಿತೆ ಬಹಳ ಚೆನ್ನಾಗಿದೆ.
ReplyDeletechendada kavite.nimma shaili ishtavaaytu :):)
ReplyDeleteಕವಿತೆ ಬಹಳ ಚೆನ್ನಾಗಿದೆ.
ReplyDeleteDivyakka... u r Fabulousssssssss
ReplyDeleteಒಂದೇ ಲೈನ್ ನಲ್ಲಿ ಹೇಳಬೇಕಂದ್ರೆ, "ಅವಿಸ್ಮರಣೀಯ.... "ಕ"ವಿಸ್ಮರನೀಯ...."ಕಿ"ವಿಸ್ಮರನೀಯ...!!
ಸಿಂಪ್ಲಿ ಸೂಪರ್ಬ್...!!