
ಮತ್ಸರ ಬೇಡ ಗೆಳೆಯ
ಕವಿ ಹೃದಯವ ನೀ ಚಿವುಟಲಾರೆ
ಭಾವ ಪನ್ನೀರ ಬಿಂದುಗಳ
ಸಿಂಚಿಸಿ ಧಮನಿ ಧಮನಿಗಳಲ್ಲೂ
ಸ್ಫೂರ್ತಿಯ ಸೃಜಿಸುವ ಎನ್ನ
ಕಾವ್ಯ ಶಕ್ತಿಯ ನೀ ತಡೆಯಲಾರೆ
ಮನದೊಳು ಗುಪ್ತಗಾಮಿನಿಯಾಗಿ
ಹರಿವ ಸ್ನೇಹ ಸೌದಾಮಿನಿಯಡಿ
ಹೊರಬಂದ ಅನುರಾಗವ ನಿಲ್ಲಿಸಲಾರೆ
ಭಾವಾನುರಾಗದ ಮಧುರಾಲಾಪವ
ನೀ ಅಪಸ್ವರದಿ ಮುಳುಗಿಸಲಾರೆ
ಕವಿ ಹೃದಯದ ಭಾವ ಸಂಚಲನೆಗಳ
ಸಂವೇದನೆಯ ವಿಜಯ ದುಂಧುಬಿಯ
ಮೊಳಗಿಸುವ ಕಾವ್ಯ ಮದ್ದಳೆಯ
ಪಕ್ಕಕ್ಕೆ ದೂಡಲಾರೆ,ಪದಗಳ ಮುದ್ದಿಸಿ ,
ಕುಣಿಸಿ ,ಲಾಲಿಸಿ ,ನಲಿಸಿ ಹುಟ್ಟಿಸಿದ
ಕವನದ ಹೊಳೆಯೊಳು ಎನ್ನ ಕೆಣಕಿದ
ನೀ ಕೊಚ್ಚಿ ಹೋಗುವೆ ಗೆಳೆಯ
ದಿವ್ಯ
ReplyDeleteಯಾವ ಗೆಳೆಯನಿಗೆ ಬರೆದಿದ್ದೀರ.....ಯಾರೋ ಭಯಂಕರವಾಗಿ ಕೆಣಕಿರೋ ಹಾಗೆ ಇದೆ...
ಗುಡ್ ಚೆನ್ನಾಗಿ ಇದೆ...
ಬಿಡುವಾದಾಗ ನನ್ನ ಬ್ಲಾಗಿನ ಕಡೆಗೂ ಬನ್ನಿ...
ಗುರು
ದಿವ್ಯಾ,
ReplyDeleteಕವನ ಚೆನ್ನಾಗಿದೆ. "ಕವನದ ಹೊಳೆಯೊಳು ಎನ್ನ ಕೆಣಕಿದ ನೀ ಕೊಚ್ಚಿ ಹೋಗುವೆ ಗೆಳೆಯ" ಏನ್ರೀ ಇದು ಬೆದರಿಕೆ ಇದ್ದ ಹಾಗಿದೆಯಲ್ಲ. ನನ್ನ ಬ್ಲಾಗಿನತ್ತ ಸಮಯವಿದ್ದಾಗ ಬರುತ್ತಿರಿ.
nice poem...good work...
ReplyDeleteದಿವ್ಯ ಮೇಡಮ್,
ReplyDeleteಕವಿ ಮನಸ್ಸಿನ ಪ್ರೀತಿಯ ಅಭಿವ್ಯಕ್ತಿ ಚೆನ್ನಾಗಿದೆ...
ಕವನದ ಹೊಳೆಯೊಳು ಎನ್ನ ಕೆಣಕಿದ
ನೀ ಕೊಚ್ಚಿ ಹೋಗುವೆ ಗೆಳೆಯ ..
ಈ ಕೊನೆಯ ಸಾಲಿನ ಉದ್ದೇಶ ತಿಳಿಯಲಾಗಲಿಲ್ಲ...
ಧನ್ಯವಾದಗಳು..
kavi hrudayada bhaavagalu madhuravagive,
ReplyDeleteu r fabulous Divyakka...!!