Monday, April 6, 2009

ಕನಸು

ಹಗಲೊಳು ನೂರಾರು ಆಸೆ ಹೂಗುಚ್ಚಗಳ
ಮನದಿ ಸೇರಿಸಿ,ಇರುಳೊಳು ನಿದ್ರಾದೇವಿಯ
ಬೆಚ್ಚನೆಯ ಮಡಿಲೋಳು ತಲೆಯಿಟ್ಟು
ದ್ವಂದ್ವ ,ತಾಕಲಾಟಗಳ ಬದಿಗೊತ್ತಿ ,
ಮೈಮರೆತು ನಿದ್ರಿಸಿ ,ನಿಗೂಢ
ಲೋಕದಿ ಪಯಣಿಸಿದ ಕನಸು
ನೀಲಿಗಗನದ ತುಂಬಾ ಗರಿಗೆದರಿ
ಮೇಘಗಳ ಚುಮ್ಬಿಸಿದಂತೆ ತಾರೆಗಳ ಕಂಡು
ಉಳಿದಂತೆ ,ಚಂದ್ರಲೋಕದ ಕ್ಷೀರ ಸಾಗರದಿ
ಮಿಂದು ಬಂದಂತೆ ,ಸುಮನೋಹರ ಶ್ವೇತ ಮುತ್ತುಗಳ ಹೊತ್ತು ತಂದು
ಮಧುರಾನಂದವ ಪಡೆದಂತೆ ಕನಸು
ಅದೃಶ್ಯ ಮನದೊಳು ಅಡಗಿ ಕುಳುತಿಹ
ಭಾವವ ಕೆಣಕಿ ,ಚಿಂತೆಗಳ ಮಥಿಸಿ
ಎಚ್ಚರ -ನಿದ್ರೆಗಳ ತ್ರಿಶಂಕು ಸ್ಥಿತಿಯ
ಕಡಲ ತೆರೆಗಳಿಂದ ಉಮ್ಮಳಿಸಿ ಬಂದ
ಸುಪ್ತ ಸಂದೇಶಗಳ ಹೊತ್ತು ತಂದಂತೆ ಕನಸು
ಜಗದ ವಿಕೋಪ ,ವೈಪರಿತ್ಯ ,ಅನಿವಾರ್ಯ ,
ಅನಿಶ್ಚತೆಗಳ ಮರೆತು ,ವಸುಂಧರೆಯ ಗರ್ಭವ
ಹೊಕ್ಕಿ ಹೊನ್ನು ,ವೈಧುರ್ಯಗಳ ಹುಡುಕಿ ,
ಹಿಡಿದು , ಆರಿಸಿ ,ಜಾಲಾಡಿಸಿ
ಅಮೂಲ್ಯ ಭವಿತವ್ಯದ ಕ್ಷಣಗಳ
ನೆನೆದು ಸಂಭ್ರಮಿಸಿದ ಕನಸು

2 comments:

  1. ದಿವ್ಯಾ
    ಈಗಷ್ಟೇ ಶಿವೂ ಅವರ ಬ್ಲಾಗಿನ ಕಿಟಿಕಿಯಿ೦ದ ನಿಮ್ಮ ಬ್ಲಾಗ್ ಮನೆಗೆ ಬ೦ದೆ. ಕವನ ಚೆನ್ನಾಗಿದೆ. ಕನಸಿನ ವಿವಿಧ ಆಯಾಮಗಳನ್ನು ಕಾವ್ಯಮಯಗೊಳಿಸಿದ್ದೀರಿ. ಅ೦ದ ಹಾಗೆ ಕವನದ ಮೊದಲ ಪದ "ಹಗಲೋಲು (ಹಗಲೊಳು) ಮತ್ತೆ ಮು೦ದೆ ಬರುವ ಕುಳುತಿಹ (ಕುಳಿತಿಹ) ಗಳನ್ನೂ ಎಡಿಟ್ ಮಾಡಿದರೆ ಚೆನ್ನಿತ್ತು. ನನ್ನ ಬ್ಲಾಗಿಗೂ ಬ೦ದು ಹೋಗಿ.
    www.nirpars.blogspot.com

    ReplyDelete
  2. ಕನಸು ನನಸಾಯ್ತು ಮಂದಾರ ಮಾಲೆ ............

    ReplyDelete