Sunday, April 12, 2009

ಕವಿ ಹೃದಯ



ಮತ್ಸರ ಬೇಡ ಗೆಳೆಯ
ಕವಿ ಹೃದಯವ ನೀ ಚಿವುಟಲಾರೆ
ಭಾವ ಪನ್ನೀರ ಬಿಂದುಗಳ
ಸಿಂಚಿಸಿ ಧಮನಿ ಧಮನಿಗಳಲ್ಲೂ
ಸ್ಫೂರ್ತಿಯ ಸೃಜಿಸುವ ಎನ್ನ
ಕಾವ್ಯ ಶಕ್ತಿಯ ನೀ ತಡೆಯಲಾರೆ
ಮನದೊಳು ಗುಪ್ತಗಾಮಿನಿಯಾಗಿ
ಹರಿವ ಸ್ನೇಹ ಸೌದಾಮಿನಿಯಡಿ
ಹೊರಬಂದ ಅನುರಾಗವ ನಿಲ್ಲಿಸಲಾರೆ
ಭಾವಾನುರಾಗದ ಮಧುರಾಲಾಪವ
ನೀ ಅಪಸ್ವರದಿ ಮುಳುಗಿಸಲಾರೆ
ಕವಿ ಹೃದಯದ ಭಾವ ಸಂಚಲನೆಗಳ
ಸಂವೇದನೆಯ ವಿಜಯ ದುಂಧುಬಿಯ
ಮೊಳಗಿಸುವ ಕಾವ್ಯ ಮದ್ದಳೆಯ
ಪಕ್ಕಕ್ಕೆ ದೂಡಲಾರೆ,ಪದಗಳ ಮುದ್ದಿಸಿ ,
ಕುಣಿಸಿ ,ಲಾಲಿಸಿ ,ನಲಿಸಿ ಹುಟ್ಟಿಸಿದ
ಕವನದ ಹೊಳೆಯೊಳು ಎನ್ನ ಕೆಣಕಿದ
ನೀ ಕೊಚ್ಚಿ ಹೋಗುವೆ ಗೆಳೆಯ

5 comments:

  1. ದಿವ್ಯ
    ಯಾವ ಗೆಳೆಯನಿಗೆ ಬರೆದಿದ್ದೀರ.....ಯಾರೋ ಭಯಂಕರವಾಗಿ ಕೆಣಕಿರೋ ಹಾಗೆ ಇದೆ...
    ಗುಡ್ ಚೆನ್ನಾಗಿ ಇದೆ...
    ಬಿಡುವಾದಾಗ ನನ್ನ ಬ್ಲಾಗಿನ ಕಡೆಗೂ ಬನ್ನಿ...
    ಗುರು

    ReplyDelete
  2. ದಿವ್ಯಾ,
    ಕವನ ಚೆನ್ನಾಗಿದೆ. "ಕವನದ ಹೊಳೆಯೊಳು ಎನ್ನ ಕೆಣಕಿದ ನೀ ಕೊಚ್ಚಿ ಹೋಗುವೆ ಗೆಳೆಯ" ಏನ್ರೀ ಇದು ಬೆದರಿಕೆ ಇದ್ದ ಹಾಗಿದೆಯಲ್ಲ. ನನ್ನ ಬ್ಲಾಗಿನತ್ತ ಸಮಯವಿದ್ದಾಗ ಬರುತ್ತಿರಿ.

    ReplyDelete
  3. ದಿವ್ಯ ಮೇಡಮ್,

    ಕವಿ ಮನಸ್ಸಿನ ಪ್ರೀತಿಯ ಅಭಿವ್ಯಕ್ತಿ ಚೆನ್ನಾಗಿದೆ...

    ಕವನದ ಹೊಳೆಯೊಳು ಎನ್ನ ಕೆಣಕಿದ
    ನೀ ಕೊಚ್ಚಿ ಹೋಗುವೆ ಗೆಳೆಯ ..
    ಈ ಕೊನೆಯ ಸಾಲಿನ ಉದ್ದೇಶ ತಿಳಿಯಲಾಗಲಿಲ್ಲ...

    ಧನ್ಯವಾದಗಳು..

    ReplyDelete
  4. kavi hrudayada bhaavagalu madhuravagive,
    u r fabulous Divyakka...!!

    ReplyDelete