Wednesday, April 8, 2009

ಆಕಳಿಕೆ



ಇರುಳಲಿ ಶಶಿ ಬಂದನೆಂದರೆ ಇದೇ ಗೋಳು

ಎದೆಯಾಳದ ನೆನಪುಗಳ ಮೂಕರಾಗಕೆ ನಾನಾಗುವೆ ಜೀತದಾಳು

ದಿನದ ಪ್ರೀತಿ ಮೊಳೆತು ಭಾವ ಬೆಳೆದು ಈ ನಿಶೆ ಬಂದಾಗ

ಮನ ಮಂದಿರ ಪಾಳು ಬರೇ ಹಾಳು ಸಾಕು

ಛೇ !ಈ ಕಾಲ ಪುರುಷ ಮಗ್ಗುಲು ಬದಲಿಸಿದರೆ ಸಾಕು ಕೊನೆಯಾಗುವುದು

ಆ ಕ್ಷಣ ಈ ಭಾವ ಬಿಕ್ಕಳಿಕೆ ,ವಿರಹದ ನರಳಿಕೆ

ಚಂದ್ರನಿಗೂ ಬರುವುದು ಆ ಹೊತ್ತಿಗೆ ಒಂದಾದ ಮೇಲೆ ಒಂದಂತೆ

ಆಕಳಿಕೆ .

3 comments:

  1. ದಿವ್ಯಾ ಮೇಡಮ್,

    ಆಹಾ! ಆಕಳಿಕೆಯ ಮೇಲು ಕವನವೇ...
    ನಿಮಗೆ ನಮೋ ನಮಃ...
    ಕವನ ಮತ್ತು ಮಗುವಿನ ಫೋಟೊ ತುಂಬಾ ಚೆನ್ನಾಗಿವೆ..
    ಧನ್ಯವಾದಗಳು..

    ReplyDelete
  2. Hi Divya,
    Chennagi ide, nimma akalike kavana.... nice photo too..

    ReplyDelete
  3. ಚಂದ್ರಮನ ಆಗಮನಕೆ
    ಕಾತರಿಸುವ ಈ ಚಕೋರ ಕೆ ನಿಶಾ ಕಾಲವೇ ಬಲು ಹಿತ...

    ReplyDelete