ಕನ್ನಡಿಗರ ಜೀವದಾಯಿನಿ, ಸರ್ವಜನ ಪೋಷಿಣಿ ,
ಅಮೃತ ವಾಹಿನಿ ,ಕಾವೇರಿ ಮಾತೆ ನೀ
ಹರಿವ ನೆಲ ಹಸಿರು ಆದರಿಂದು ನಿನ್ನ
ಮಕ್ಕಳೇ ನಿನಗಾಗಿ ಸುರಿಸುತಿಹರು ನೆತ್ತರು .
ನಾವು ನಿನ್ನ ಕುಡಿಗಳು,ನಿನ್ನಂತೆ ಉದಾರಿಗಳು ದಿಟ ,
ಆದರೆಂದೂ ಸಹಿಸೆವು ನೆರೆಯವರ ಮೋಸದಾಟ ,
ನಮ್ಮಲ್ಲೇ ಖಾಲಿ ಕೊಡಗಳ ಸಾಲು ,
ಪರರಿಗೆಂತು ಕೊಡುವುದು ಹೆಚ್ಚು ಪಾಲು .
ಕರುನಾಡ ನೆಲದಲ್ಲಿ ಜನಿಸಿ ತುಳುಕಿ ,ಬಳುಕಿ ,
ನೆರೆ ರಾಜ್ಯದಲ್ಲಿ ಸಂಚರಿಸಿ ಅಂತ್ಯದಿ ಸಾಗರನ ಅಪ್ಪಿ ,
ನಲಿವ ಕಾವೇರಿ ತಾಯೇ ಒಮ್ಮೆ ನೋಡು ನಿನ್ನ ತವರಿನ ಮಕ್ಕಳ
ದಣಿದ ಬಾಯ್ಗಳ,ರೈತನ ರಕ್ತ ಕಣ್ಣೀರ .
ಅನೈಕ್ಯ ಮತವ ತುಳಿದು ನಿಂತಿಹೆವು ,
ಈ ನಮ್ಮ ಹೋರಾಟ ಅಮರವು ,
ಭೇದ ಭಾವಗಳ ಗಾಳಿಗೆ ತೂರಿ ಮುನ್ನುಗ್ಗುತಿಹೆವು
ನಿನ್ನ ಬಿಡೆವು ತಾಯೇ ಎಂದೆಂದೂ ನಿನ್ನ ಬಿಡೆವು !!!

No comments:
Post a Comment