Tuesday, March 24, 2009

ಅಪ್ಪಾನಿನಗೆ ................ನನ್ನ ನಮನ


ವಾತ್ಸಲ್ಯಮಯಿ ತಾಯಿ ಉತ್ತಮ ಮಾರ್ಗದರ್ಷಕನಾದ ತಂದೆ ಯನ್ನು ಪಡೆದ ಮಗ/ಮಗಳು ಈ ಸಮಾಜದ ಆಸ್ತಿಯಾಗುತ್ತಾರೆ .ಭಾವಿ ಭವಿಷ್ಯದ ಯಶಸ್ವೀ ಪ್ರಜೆಯಾಗುತ್ತಾರೆ .ಇತರರಿಗೆ ಆದರ್ಶವಾಗುತ್ತಾರೆ .

ಒಂದು ಮಗುವಿನ ಸರ್ವಾಂಗೀಣ ಅಭಿವೃದ್ಧಿಯಲ್ಲಿ ತಾಯಿಯ ಪಾತ್ರ ಎಷ್ಟಿದೆಯೋ ಅಷ್ಟೆ ಮಹತ್ವದ ಪಾತ್ರವನ್ನು ತಂದೆ ಕೂಡ ವಹಿಸುತ್ತಾರೆ .ಈ ಆಧುನಿಕ ಸಮಾಜದಲ್ಲಿ ಕೇವಲ ತಾಯಿ ಮಾತ್ರವಲ್ಲ ತಂದೆಯೂ ಮಗುವಿನ ಜವಾಬ್ಧಾರಿ ಹೊರಬೇಕಾಗುತ್ತದೆ .ತಾಯಿಯು ಉದ್ಯೋಗಸ್ಥಳಾಗಿರುವುದರಿಂದ ಮಗುವಿನ ಪೋಷಣೆಯ ಹೊಣೆಗಾರಿಕೆಯನ್ನು ತಾನು ಹಂಚಿಕೊಲ್ಲಬೇಕಾಗುತ್ತದೆ .ತಂದೆಯ ಹಿತಮಿತವಾದ ಶಿಸ್ತು ಹಾಗು ರಕ್ಷಣೆಯಲ್ಲಿ ಸರಿಯಾಗಿ ಬೆಳೆಯದ ಮಗು ಮುಂದೆ ಸಮಾಜ ಕಂಟಕ ವಾಗುತ್ತದೆ .

ಕೇವಲ ಜನ್ಮದಾತನಾಗಿದ್ದರೆ ಮಾತ್ರ ಸಾಲದು ಆತ ಸಮರ್ಥ ಹಾಗು ಜವಾಬ್ಧಾರಿಯುತ ತಂದೆಯೂ ಆಗಿರಬೇಕು .ಮಕ್ಕಳಲ್ಲಿ ತನ್ನ ಗುರಿ ,ಕನಸುಗಳ ಬಗ್ಗೆ ತಿಳಿಸಿ ಅವರನ್ನು ಅದಕ್ಕಾಗಿ ಮಾನಸಿಕವಾಗಿ ಸಿದ್ಧ ಪಡಿಸಿ ಮುಂದೆ ಆ ಸಾಧನೆಯ ಹಾಡಿ ತುಲಿಯುವವರೆಗೂ ಆತ ತಾಳ್ಮೆ ಹಾಗು ಸಂಯಮಗಳಿಂದ ಇರಬೇಕು .
ತಪ್ಪು ಮಾಡಿದಾಗ ಅದನ್ನು ಜಾಣ್ಮೆಯಿಂದ ತಿದ್ದಿ ಹೇಳಿ ಉತ್ತಮ ಮಾರ್ಗದರ್ಷಕನಾಗಬೇಕು . ಕೇವಲ ಕೈತುಂಬಾ ದುಡಿದು ಮಕ್ಕಳಿಗೆ ಎಲ್ಲ ಸವಲತ್ತುಗಳನ್ನು ಒದಗಿಸಿ ತನ್ನ ಕರ್ತವ್ಯ ಮುಗಿಯಿತೆಂದು ಕೈ ತೊಳೆದುಕೊಳ್ಳುವ ಅಪ್ಪನಿಗಿಂತ ಮಕ್ಕಳಿಗೆ ನೈತಿಕ ಹಾಗು ಮಾನಸಿಕ ಬಲ ನೀಡುವ ಆದರ್ಶ ತಂದೆ ಬೇಕು .

ತಾಯಿಯ ಸಾಮಿಪ್ಯ ನಮಗೆ ಖುಷಿಯೊಂದಿಗೆ ರಕ್ಷಣಾತ್ಮಕ ಭಾವನೆ ನೀಡಿದರೆ ತಂದೆಯ ಒಡನಾಟ ನಮ್ಮಲ್ಲಿ ಆತ್ಮವಿಶ್ವಾಸ ಚಿಗುರೊಡೆಯುವಂತೆ ಮಾಡುತ್ತದೆ .ಫಲಭರಿತ ನಿರೀಕ್ಷೆಗಳನ್ನು ಹುಟ್ಟುಹಾಕುತ್ತದೆ . ಕೆಲವೊಮ್ಮೆ ಮಗುವಿನ ಪಾಲನೆ ಲಾಲನೆ ಮಾಡುವ ವಿಷಯಕ್ಕೆ ಬಂದರೆ ತಂದೆ ಮತ್ತೊಬ್ಬ ತಾಯಿಯೇ ಆಗುತ್ತಾನೆ .ಆ ಮಗು ಶೈಶವಾವಸ್ಥೆ ಇಂದ ಯವ್ವನಾವಸ್ಥೆಗೆ ತಲುಪುವವರೆಗೂ ಅದರ ಇಷ್ಟಾನಿಷ್ಟಗಳು ,ಸಾಮರ್ಥ್ಯ,ಪ್ರತಿಭೆಗಳು .ಆಸಕ್ತಿ ,ಕನಸುಗಳನ್ನು ಅರಿತುಕೊಂಡು ಪ್ರೋತ್ಸಾಹ ಕೊಟ್ಟು ಕರ್ತವ್ಯವನ್ನು ಮೆರೆದ ಸಾರ್ಥಕ ತಂದೆಯಾಗಬೇಕಾಗುತ್ತದೆ.

ಹೆಣ್ಣುಮಕ್ಕಳಿಗೂ ತಂದೆಗೂ ಏನೋ ಒಂದು ಭಾವನಾತ್ಮಕ ಸಂಭಂಧವಿರುತ್ತದೆ .ತಂದೆ ಎಷ್ಟೋ ಶಿಸ್ತಿನಿಂದಿದ್ದರೂ ಗಂಡು ಮಕ್ಕಳಿಗಿಂತ ಹೆಣ್ಣುಮಕ್ಕಳ ಬಗ್ಗೆ ಅವರಿಗೆ ಸಾಫ್ಟ್ ಕಾರ್ನರ್ ಇರುತ್ತದೆ ಎಂಬುದನ್ನೂ ಯಾರೇ ಆದರು ಒಪ್ಪಲೇಬೇಕು .
ಒಬ್ಬ ತಂದೆ ತಾಯಿಯ ಅನುಪಸ್ಥಿತಿಯಲ್ಲಿ ಹೇಗೆ ಆ ಸ್ಥಾನವನ್ನು ತುಂಬಬಲ್ಲ ಎಂಬುದಕ್ಕೆ ಕಾಳಿದಾಸನ 'ಅಭಿಜ್ಞಾನ ಶಾಕುಂತಲ 'ಉತ್ತಮ ಉದಾಹರಣೆ .ಆ ಮಹತ್ತರ ನಾಟಕದಲ್ಲಿ ೪ ನೆಯ ಅಂಕ ವಿಶ್ವಮಾನ್ಯತೆ ಯನ್ನು ಗಳಿಸಲು ಕಾರಣ ಗೊತ್ತೇ ?ಅಲ್ಲಿ ಕಣ್ವ ಮಹರ್ಷಿ ಗಳು ತಮ್ಮ ಸಾಕು ಮಗಳು ಶಾಕುಂತಲೆಯನ್ನು ದುಷ್ಯಂತನ ಬಳಿ ಕಳುಹಿಸುವಾಗ ಪಿತೃ ಪ್ರೇಮವನ್ನು ಮೆರೆಯುವುದರೊಂದಿಗೆ ತಾಯಿಯಂತೆ ಉಪದೇಶಿಸುತ್ತಾರೆ .ಗಂಡನ ಮನೆಯಲ್ಲಿ ಹೇಗೆ ಸಾರ್ಥಕ ಬದುಕನ್ನು ಸಾಗಿಸಬೇಕೆಮ್ಬುದನ್ನು ತಿಳಿ ಹೇಳುತ್ತಾರೆ .ಇಡಿ ೪ ನೆಯ ಅಂಕ ಅದರಲ್ಲೂ ೪ ನೆಯ ಶ್ಲೋಕ ದಲ್ಲಿ ಒಬ್ಬ ತಂದೆ ತನ್ನ ಮಗಳನ್ನು ಪತಿಗೃಹಕ್ಕೆ ಕಲಿಸುವಾಗ ಪಡುವ ಸಂಕಟ ,ಯಾತನೆಗಳನ್ನು ಪ್ರತಿಬಿಂಬಿಸುವ ಒಬ್ಬ ಜವಾಬ್ಧಾರಿಯುತ ಹಾಗು ವಾತ್ಸಲ್ಯಮಯೀ ತಂದೆಯ ಪಾತ್ರ ಚಿತ್ರಣ ಮಾಡುತ್ತದೆ .

ಭಯವಾದಾಗ ಅಮ್ಮನ ಅಕ್ಕರೆಯ ಮಡಿಲು ,ಪ್ರೀತಿಯ ಅಪ್ಪುಗೆ ,ತಂದೆಯ ವಿಶ್ವಾಸ ಪೂರ್ಣ ಮಾತುಗಳು ನಮ್ಮ ಬದುಕಿನ ದಾರಿ ದೀವಿಗೆ .
ಪೂರ್ಣ ಪಾಲಕತ್ವದ ಮುಖಾಂತರ ಭೇದ ,ಜವಾಬ್ಧಾರಿಗಳನ್ನು ಮೆಟ್ಟಿ ನಿಂತು ಆತ್ಮಾಭಿಮಾನದೊಂದಿಗೆ ತಮ್ಮ ಮಕ್ಕಳಿಗೆ ಪ್ರೀತಿ ನೀಡಿ ಅವರ ಕೌಶಲ್ಯ ಪ್ರತಿಭೆಗಳಿಗೆ ಬೆಲೆ ಕೊಡುವ ತಂದೆ ತಾಯಿಯನ್ನು ಪಡೆದ ಮಕ್ಕಳೇ ನಿಜಕ್ಕೋ ಧನ್ಯರು. ಮಹಾನ್ ಅದೃಷ್ಟವಂತರು .

No comments:

Post a Comment