Sunday, March 8, 2009

ವಿಜ್ರ್ಯುಮ್ಭಿಸುತ್ತಿರುವ ನನ್ನ ನಾಡು

ಇದು ನನ್ನ ನೆಲ ,ಇದು ನನ್ನ ಜಲ
ಇದು ನನ್ನ ಭಾಷೆ ,ಇದು ನನ್ನ ಸಂಸ್ಕೃತಿ .

ಬೆಂದಕಾಳೂರು ,ಮಹಿಷೂರು ,ಸಿಹಿಮೊಗೆ ,ಕುವಲಾಳಪುರ ,
ವೈಜಯನ್ತಿಪುರ ,ಕುದಾಲ ,ಸಿನ್ದಾಪುರ ,ರಾಯೂರು ,ದ್ವಾರವಾಡಿ
ನೆಲದಲ್ಲಿ ಸಂಚರಿಸಿ ಇತಿಹಾಸ ಪುನರ್ರಚಿಸುವೇನು .
ಹಲ್ಮಿಡಿ , ಪಟ್ಟದ ಕಲ್ಲು ,ಐಹೊಳೆ ,ಬ್ರಮ್ಹಗಿರಿ ಶಾಸನಗಳ
ಓದಿ ಸುವರ್ನಯುಗವ ನೆನೆದು ಸಂಭ್ರಮಿಸುವೆನು.

ಕಾವೇರಿ ,ಕೃಷ್ಣೇ ,ಕಾಳೀ ,ಶರಾವತಿ ,ಹೆಮಾವತಿಗಳಲಿ ಬಳುಕಿ
ತುಳುಕುವೇನು ,ಜೋಗ ,ಜಲದುರ್ಗ ,ಅಬ್ಬಿ ,ಇರುಪ್ಪು ,ಗೋಕಾಕ್ ,
ಉಂಚಳ್ಳಿ ಜಲಧಾರೆಗಳಲ್ಲಿ ಒಂದಾಗಿ ಧುಮ್ಮಿಕ್ಕುವೇನು .ಅಮ್ಬಾವಿಲ್ಲಸ ,
ಜಗನ್ಮೋಹನ, ಕಮಲಮಹಲ್ ,ವಸಂತಮಹಲ್ ,ಲಲಿತಮಹಲ್,
ಗಗನ ಮಹಲ್ ಗಲ್ಲಿ ಗಾಮ್ಭೀರ್ಯದಿ ರಾಣಿಯಂತೆ ಮೆರೆಯುವೆನು.

ಜಂಬೂಸವಾರಿ,ಕರಗ,ಪಂಚಲಿಂಗ,ಕುಂಭಮೇಳ,ಮಹಾ
ಮಸ್ತಕಾಭಿಷೇಕ ,ತೀರ್ತ್ಹೊದ್ಭವ,ಲಕ್ಷ ದೀಪೋತ್ಸವ ,ವೈರುಮುಡಿ ,
ವಿಜಯನಗರೋತ್ಸವಗಳ ಕಂತುಮ್ಬಿಸಿ ,ಕದಂಬ ,ಗಂಗಾ ,ಚಾಲುಕ್ಯ ,
ರಾಷ್ಟ್ರಕೂಟ ,ಹೊಯ್ಸಳ ,ವಿಜಯನಗರ , ಯದುವಂಶ ದ
ರಾಜವೈಭಾವವ ಮರು ಕಾ ಣು ವೆ ಣು .

ಶರನವಚನ ,ದಾಸ ಕೀರ್ತನೆ ,ಜನಪದ , ತತ್ವಪದಗಳ
ಎನ್ನ ಕರ್ನಗಳಲಿ ಗುನುಗಿಸಿ ,ದೇವಾಲಯ ,ಜಿನಾಲಯ ,
ಚೈತ್ಯಾಲಯ ,ಚರ್ಚು ,ಮಸೀದಿಗಳ ವಂದಿಸಿ ಸರ್ವೋದಯ ,
ಸಮನ್ವಯತೆಯ ದಈಗ ದಿಗಂತಗಳ ಮೊಳಗಿಸುವೆನು .

ಕರಾವಳಿಯ ಅಲೆಗಲಿಂ ಅಭಿಷೆಕವ ಮಾಡಿ ,
ಸಹ್ಯಾದ್ರಿಯ ಎಲೆ , ಅಡಿಕೆಯ ಸೇರಿಸಿ ,
ಬಯಲು ಸೀಮೆಯ ಮಲ್ಲಿಗೆಯ ಕಲೆ ಹಾಕಿ ,
ಕನ್ನಡಮ್ಮನ ಚರಣವ ವಂದಿಪೆನು .

No comments:

Post a Comment