Wednesday, March 25, 2009

ಇದೆಂಥಾ ಲೋಕವಯ್ಯ ?

ಇದ್ದಕಿದ್ದಂತೆ ನಿಮ್ಮ ಮನೆ ಫೋನ್ ರಿಂಗಣಿಸುತ್ತದೆ .ನೀವು ರಿಸೀವರ್ ಎತ್ತಿ ಹೆಲೋ ಎನ್ನುತ್ತಿರಿ ಆಗ ಸುಂದರವಾದ ಅಪರಿಚಿತ ಹೆಣ್ಣು ಧ್ವನಿಯೊಂದು " namaste ಸರ್ ನಿಮಗೊಂದು ಗುಡ್ ನ್ಯೂಸ್ ನಿಮ್ಮ ಹೆಸರನ್ನು ಫೋನ್ ಬುಕ್ ನಲ್ಲಿ ಹುಡುಕಿ ಆಯ್ಕೆ ಮಾಡಿದ್ದೇವೆ .ನಿಮಗೆ ನಮ್ಮ ಸಂಸ್ಥೆಯಾದ .............ರಿಂದ ವಿಶೇಷ ಉಡುಗೊರೆ ದೊರೆಯಲಿದೆ ದಯವಿಟ್ಟು ಈಗ ನಾನು ಹೇಳುವ ವಿಳಾಸಕ್ಕೆ ನಿಮ್ಮ ಹೆಂಡತಿ ಮಕ್ಕಳೊಂದಿಗೆ ಬದು ಸ್ವೀಕರಿಸಿ ಎಂದು ನಿಮಗೆ ಮಾಡುವೆ ಮನೆಗೆ ಆವ್ಹಾನಿಸುವಂತೆ ಕರೆಯುತ್ತದೆ .ನಿಮಗೆ ಮಾತನಾಡಲೂ ಅವಕಾಶ ಕೊಡದೆ ನಿಮ್ಮ ಹೆಸರು ವಿದ್ಯಾಭ್ಯಾಸ ಸಂಬಳ ಪ್ರತಿಯೊಂದು ಮಾಹಿತಿಯನ್ನೂ ಸಂಗ್ರಹಿಸುತ್ತದೆ .
ನೀವೂ ಕೂಡ ಆ ಮಾತುಗಳನ್ನು ಅಕ್ಷರಸಹ ನಮ್ಬುತ್ತಿರಿ ಏಕೆಂದೆರೆ ಆ ಧ್ವನಿಯಲ್ಲಿ ನಿಮಗೆ ನಂಬಿಕೆ ಹುಟ್ಟಿಸುವ ಆಕರ್ಷಣೆ ಇದೆ .ಹೇಳಿದ ಸಮಯಕ್ಕೆ ಅವರು ಕೊಟ್ಟಿರುವ ವಿಳಾಸಕ್ಕೆ ನೀವು ಅರೆಸಿ ಹೋಗುತ್ತಿರಿ .ಆ ಜಾಗ ಊರಿನಿಂದ ಹೊರಗಿದ್ದರೂ ಆಶ್ಚರ್ಯವಿಲ್ಲ . ನಿಮ್ಮದೇ ವಾಹನ ವಿದ್ದರೆ ಪೆಟ್ರೋಲ್ ಖರ್ಚು ಮಾಡಿಕೊಂಡು ಅಥವಾ ಆಟೋ ದಲ್ಲಿ ಮೀಟರ್ ಗಿಂತ ಜಾಸ್ತಿ ದುಡ್ಡು ಕೊಟ್ಟು ಆ ಜಾಗವನ್ನು ತಳಪುತ್ತಿರಿ .

ನಿಮಗಿಂತ ಮುಂಚೆಯೇ ಅಲ್ಲಿಗೆ ಬಂದು ಅಲ್ಲಿನ ಮಾರಾಟ ಪ್ರತಿನಿಧಿಗಳ ಉದ್ದುದ್ದ ಭಾಷಣ ಕೇಳಿ ಸುಸ್ತಾಗಿ , ಮುಖ ಸಿಂಡರಿಸಿಕೊಂಡು ಬಕರಾಗಳಾಗಿ ಹೊರಬರುತ್ತಿರುವವರನ್ನು ಕಂಡು ಇನ್ನೇನು ನೀವು ಕಾಲ್ತೆಗೆಯಬೇಕು ಅನ್ನುವಷ್ಟರಲ್ಲಿ ಅಲ್ಲೇ ಇರುವ ಕಂಪನಿಯ ಮಂದಿ ನಿಮಗೆ ಮುಗುಳ್ನಗೆ ಕೊಡುತ್ತಾ ಒಳಗೆ ಸ್ವಾಗತಿಸುತ್ತಾರೆ !ಬಳಿ ಪಶುಗಳಂತೆ ಬೇರೆ ದಾರಿ ಇಲ್ಲದೆ ನೀವು ಒಳಗೆ ತೆರಳುತ್ತಿರಿ ಅಲ್ಲಿ ಪ್ರತಿ ಕುಟುಂಬಕ್ಕೂ ಪ್ರತ್ಯೇಕ ಕುರ್ಚಿ ಟೇಬಲ್ ಗಳಿರುತ್ತವೆ ನೀವು ಹೋದ ತಡ ಬಕಪಕ್ಷಿಯಂತೆ ಕಾಯುತ್ತಿದ್ದ ಮಾರಾಟ ಪ್ರತಿನಿಧಿಯೊಬ್ಬ ನಿಮ್ಮನ್ನು ಅಲ್ಲೇ ಕೂರಿಸಿ ದುಂಡು ಮೇಜಿನ ಸಮ್ಮೇಳನವನ್ನು ಪ್ರಾರಂಭಿಸುತ್ತಾನೆ .ಬೇರೆಯವರೂ ನಿಮ್ಮಂತೆ ಅಕ್ಕ ಪಕ್ಕ ಕುಳಿತಿರುವುದರಿಂದ ಮೆಲ್ಲನೆ ಮಾತನಾಡುತ್ತಾನೆ . ಆದ್ದರಿನ ಆತ ನಿಮಗೆ ಬಹಳ ಸಮೀಪದಲ್ಲೇ ಕುಳಿತು ಮಾತನಾಡುತ್ತಾನೆ .ಆದ್ದರಿಂದ ನೀವು ಬೆನ್ನು ಬಾಗಿಸಿ ಅವನ ಮುಂದೆ ಬಂದು ಕೂರಬೇಕಾಗುತ್ತದೆ ಅದು ಅವನ ಪ್ರಾರ್ಥನೆಯಾಗಿರುತ್ತದೆ ಆಗ್ರಹವಲ್ಲ .ನಿಮಗೆ ಅರ್ಥವಾಗುವ /ಆಗದ ಕಂಪನಿಯ ಎಲ್ಲ ವಿಷಯಗಳ ಬಗ್ಗೆ ನಿಮ್ಮ ಮುಂದೆ ಉಪನ್ಯಾಸ ನೀಡುತ್ತಾನೆ .ಒಂದೇ ಸಮನೆ ಮಾತಿನ ಮಳೆಯೇ ಹುಯ್ಯುತ್ತದೆ .ಸ್ವಲ್ಪ ವಿಶ್ರಾಂತಿಗಾಗಿ ನೀವು ಹಿಂದೆ ಕುರ್ಚಿಗೆ ಒರಗಿದರೂ ಆತ ಹಲ್ಲು ಕಿರಿಯುತ್ತಾ ಕೊಂಚ ಮುಂದೆ ಬರುವಂತೆ ಕೇಳಿಕೊಳ್ಳುತ್ತಾನೆ .ಅವನ ಮಾತುಗಳನ್ನು ಕೇಳಬೇಕಲ್ಲ ಎಂಬ ಮಾನಸಿಕ ಹಿಂಸೆ ಒಂದೆಡೆ ಯಾದರೆ ಈ ಧಯ್ಯಿಕ ಶಿಕ್ಷೆ ಬೇರೆ ನಿಮ್ಮನ್ನು ಕೆರಳಿಸುತ್ತದೆ ಆದರು ಸಮಾಧಾನ ಮಾಡಿಕೊಳ್ಳುತ್ತಿರಿ ಉಡುಗೊರೆಗಾಗಿ .

ನಿಮಗೆ ಹತ್ತಿರದವನೇನೋ ಎನ್ನುವ ಮಟ್ಟದಲ್ಲಿ ನಿಮ್ಮ ಎಲ್ಲ ಖಾಸಗಿ ವಿಷಯಗಳನ್ನು ಮಾತನಾಡುತ್ತಾನೆ ನಿಮ್ಮನ್ನು ಅಟ್ಟದ ಮೇಲೆ ಕೂರಿಸುತ್ತಾನೆ .ನಿಮ್ಮ ಪತ್ನೀ ಮಕ್ಕಳಿಗೆ ಅವನ ಮಾತುಗಳು ಬೋರು ಹೊದೆಸುತ್ತಿರುತ್ತವೆ ,ಆಗ ಮನೆಗೆ ಬನ್ನಿ ವಿಚಾರ್ಸ್ಕೊತಿನಿ ಎಂದು ನಿಮ್ಮ ಹೆಂಡತಿ ನಿಮ್ಮನ್ನು ದುರುಗುಟ್ಟಿ ನೋಡಿದರೂ ಆಶ್ಚರ್ಯವಿಲ್ಲ .

ನೀವು ನಿಮಗೆ ಬಂದಿರುವ ಉದುಗೊರೆಬಗ್ಗೆ ಕೇಳಿದರೆ ಅವರ್ಯಾರೂ ಅದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ .ಬದಲಾಗಿ ತಮ್ಮ ಸಂಸ್ಥೆ ,ಅದರ ಕಾರ್ಯಗಳು ,ಸದಸ್ಯತ್ವ ಪಡೆದು ಕೊಳ್ಳುವ ಬಗ್ಗೆ ಗಂಟೆ ಗಟ್ಟಲೆ ಕೊರೆದು ನಿಮ್ಮ ತಲೆಯೊಳಗೆ ಕೈ ಹಾಕುತ್ತಾರೆ .ನಿಮ್ಮನ್ನು ತಮ್ಮ ಸದಸ್ಯರನ್ನಾಗಿ ಮಾಡಿಕೊಳ್ಳಲು ಶತಾಯ ಗತಾಯ ಪ್ರಯತ್ನಿಸುತ್ತಾರೆ .ಊಹು ನೀವು ಬಗ್ಗಲಿಲ್ಲ ಎಂದಾಗ ಕೊನೆಗೆ ಧನ್ಯವಾದ ಹೇಳಿ ಐಸ್ ಕ್ರೀಮ್ ಬೌಲನ್ನೋ ಅಥವಾ ಪೆನ್ ಸೆಟ್ ಅನ್ನೋ ಕೊಟ್ಟು ಕಳುಹಿಸುತ್ತಾರೆ .ಅಲ್ಲಿನವರು ನಿಮಗೀಗ ಕೊಟ್ಟಿರುವ ಗಿಫ್ಟ್ ನೀವು ಇಲ್ಲಿಗೆ ಬರಲು ಕರ್ಚು ಮಾಡಿರುವ ಆಟೋ ಚಾರ್ಜು ಅಥವಾ ಪೆಟ್ರೋಲ್ ಬೆಲೆಯ ಅರ್ಧದಷ್ಟಿರುವುದಿಲ್ಲ .

ಅಬ್ಬ ಎಂತಹ ಬುಸಿನೆಸ್ ಇದು !ಇಂತಹ ಅನುಭವ ನಿಮಗಾಗಿಲ್ಲವೇ ಹಾಗಾದ್ರೆ ಕಂಗ್ರಾಟ್ಸ್ ನೀವು ಬಕರ ಆಗಿಲ್ಲ ಅಂತ ಅರ್ಥ .ಎಚ್ಚರಿಕೆ ಸಾಮಾನ್ಯವಾಗಿ ದೂರವಾಣಿಗಳಲ್ಲಿ

ನೀವು ಒಂದೇ ಬಾರಿಗೆ ಲಕ್ಷದಷ್ಟು ಹಣವನ್ನು ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆಯ ಬಹುದು
ಫಾರಿನ್ ಟ್ರಿಪ್ಪಿಗೆ ಉಚಿತವಾಗಿ ಹೋಗಬಹುದು
ಲಕ್ಕಿ ದಿಪ್ಪಿನಲ್ಲಿ ನಿಮ್ಮ ಹೆಸರು ಆಯ್ಕೆಯಾಗಿದೆ
ವಿದೇಶಿ ಲಾಟರಿ ಬಂದಿದೆ

ಹೀಗೆ ಹೇಳಿ ತಮ್ಮ ಗಾಳಕ್ಕೆ ನಿಮ್ಮನ್ನು ಸಿಕ್ಕಿಸಿ ಕೊಳ್ಳುತ್ತಾರೆ.ದಯವಿಟ್ಟು ಜಾಕರೂಕತೆಯಿಂದ ಇರಿ .ನಿಮ್ಮ ಖಾಸಗಿ ವಿಷಯಗಳನ್ನು ಅವರಿಗೆ ಬಿಟ್ಟು ಕೊಡ ಬೇಡಿ .ನಿಮ್ಮ ಬ್ಯಾಂಕ್ ಅಕೌಂಟ್ ನಂಬರ್ ,ಕ್ರೆಡಿಟ್ ಕಾರ್ಡ್ ನಮ್ಬರ್ಗಳಬಗ್ಗೆ ಏನೂ ಮಾಹಿತಿ ನೀಡ ಬೇಡಿ .ಅವರಿಗೆ ತಿಳಿದಿದೆ ಹೇಗೆ ಮಧ್ಯಮ ವರ್ಗದ ಜನರನ್ನು ತಮ್ಮ ಗುಂಡಿಗೆ ಬೀಳಿಸಿ ಕೊಳ್ಳಬಹುದೆಂದು .ಸುಮ್ಮನೆ ಗಂಟಗಟ್ಟಲೆ ನಮ್ಮ ಹಣ ಸಮಯ ನೆಮ್ಮದಿ ಎಲ್ಲವನ್ನೂ ವ್ಯರ್ಥ ಮಾಡಿಕೊಂಡು ಅವರಿಂದಲೇ ಮೋಸ ಹೋಗಿ ಇದೆಂತ ಲೋಕವಯ್ಯ ಎಂದು ತಲೆ ಮೇಲೆ ಕೈ ಬರುವ ಮುನ್ನ ನೆನೆಪಿರಲಿ ಇದಿಂದು ಪಕ್ಕಾ ಬುಸಿನೆಸ್ ಫ್ರಾಡ್ .

No comments:

Post a Comment