Tuesday, March 24, 2009

ಸುಂದರ ಲೋಕದ ಡೊ೦ಕುಗಳು


ನಿನ್ನೆ ರಾತ್ರಿ ನಾನು ಸುಂದರ ನಿದ್ದೆಯಲ್ಲಿದ್ದಾಗ ಇದ್ದಕ್ಕಿದ್ದಂತೆ ಯಾರೋ ನನ್ನನ್ನು "ಮಗು ಎದ್ದೇಳು ಯಾರು ಬಂದಿದ್ದೀನಿ ನೋಡು " ಎಂದು ಹೇಳಿದಂತಾಗಿ ಕಣ್ಣು ಬಿಟ್ಟು ನೋಡುತ್ತೀನಿ !ಬಿಳಿ ಸೀರೆ ತೊಟ್ಟ ,ಹೆಗಲ ಮೇಲೆ ತಲೆಗೂದಲು ಬಿಟ್ಟು ,ಹಲ್ಲುಗಳೇ ಇಲ್ಲದ ಯಾವುದೋ ಮುದುಕಿ ಬಾಯಿ ತುಂಬ ಹ್ಹ ಹ್ಹ ಹ್ಹ ಹ್ಹ ಎಂದು ನಗುತ್ತಿದೆ .ಭಯವಾಗಿ "ಅಮ್ಮಾ "endaರಚೋಣ ಎಂದರೆ ಗಾಬರಿಗೆ ಅದೂ ಸಾಧ್ಯವಾಗುತ್ತಿಲ್ಲ . "ಯಾರು ನೀನು?"ಎಂದು ತಡವರಿಸುತ್ತಾ,ಹಣೆಯ ಮೇಲಿನ ಬೆವರನ್ನು ಒರಿಸುತ್ತ ಕೇಳಿದೆ ."ಸ್ವಲ್ಪ ನೆನಪಿಸಿಕೋ ಮಗು ಶೋಕೇಸಿನಲ್ಲಿ ಇಟ್ಟಿರುವ ನಿಮ್ಮ ತಾತನ ಫೋಟೋವಿನ ಪಕ್ಕದಲ್ಲಿ ಯಾರ ಫಾತೊವಿದೆ ಎಂದು "ಹೀಗೆ ಹೇಳಿತು ಭೂತ . ನಾನು ಯೋಚಿಸಿ "ಅದು ನಮ್ಮಜ್ಜಿಯ ಫೋಟೋ "ಎಂದೆ ."ಅದು ನಾನೇ ಮಗು .ನೀನು ಹುಟ್ಟುವುದಕ್ಕಿಂತ ಮುಂಚಿತವಾಗಿಯೇ ನಾನು ಸ್ವರ್ಗ ಸೇರಿದ್ದರಿಂದ ನಿನಗೆ ನನ್ನ ಮುಖಪರಿಚಯ ಸರಿಯಾಗಿಲ್ಲ ಅಷ್ಟೆ "ಎಂದಾಗ ಗಾಬರಿಯಾಗಿ "ಹಾಗಾದರೆ ನೀನು ಭೂತಾನ ?"ಎಂದೆ "ಇಲ್ಲ ನಾನು ನಿಮ್ಮಜ್ಜಿ "ಎಂದು ನನ್ನ ಪಕ್ಕದಲ್ಲೇ ಕುಳಿತುಕೊಂಡಿತು ಭ್ಹೊತ ಅಲ್ಲ ಕ್ಷಮಿಸಿ ನನ್ನ ಅಜ್ಜಿ . ರಾತ್ರಿಯೆಲ್ಲಾ ನಾನು ಗಡ ಗಡ ,ಆದರು ಸ್ವಲ್ಪ ಧೈರ್ಯ ತೆಗೆದುಕೊಂಡೆ .ಬಹಳ ಒಳ್ಳೆಯ ಅಜ್ಜಿ ಎಂದು ತಿಳಿದ ಮೇಲೆ ಬದುಕಿದ್ದೂ ಭೂತದಂತೆ ಕಾಡುವ ಕೆಲ ಜನರಿಗಿಂತ ಸತ್ತು ಭೂತವಾಗಿರುವ ಅಜ್ಜಿಯೇ ಎಷ್ಟೋ ಮೇಲು ಎಂದೆನೆಸಿ "ಅಜ್ಜಿ ನೀನೇಕೆ ಇಲ್ಲಿಗೆ ಬಂದೆ "ಎಂದು ಕೇಳಿದೆ.ಅದಕ್ಕೆ "ಈಗ ನಮ್ಮ ಊರು ಬಹಳ ಬದಲಾಗಿದೆಯಂತೆ ಸ್ವರ್ಗದಲ್ಲಿ ಮಾತನಾಡಿಕೊಳ್ಳುತ್ತಿದ್ದರು .ಅದಕ್ಕೆ ನೋಡಬೇಕೆಂದು ಬಂದೆ ನನಗೆ ಬೆಳಿಗ್ಗೆ ಊರನ್ನೆಲ್ಲ ತೋರಿಸ್ತಿಯ "ಎಂದು ಕೇಳಿಕೊಂಡಿತು ಭೂತ ಅಲ್ಲ ಅಜ್ಜಿ ಅಲ್ಲ ಅಯ್ಯೋ ಒಟ್ಟಿನಲ್ಲಿ ಭೂತಜ್ಜಿ . ಮಾರನೆಯ ದಿನ ಬೆಳಿಗ್ಗೆ ಅಜ್ಜಿಯನ್ನು ವಾಕಿಂಗ್ ಕರೆದುಕೊಂಡು ಆಚೆಗೆ ಹೊರೆಟೆ.ಅಲ್ಲೇ ಪಾರ್ಕಿನಲ್ಲೇ ಕಲ್ಲು ಬೆಂಚಿನ ಮೇಲೆ ಕುಳಿತುಕೊಂಡು ಅಜ್ಜಿ ಸುಧಾರಿಸಿ ಕೊಳ್ಳುತ್ತಿದ್ದರು ಸ್ವಲ್ಪ ಸಮಯದ ನಂತರ "ಮಗು ಅಲ್ನೋಡು ಪಾಪ!ಎಷ್ಟು ಚಿಕ್ಕ ವಯಸ್ಸು ,ನೋಡಕ್ಕೂ ಚೆನ್ನಾಗಿದ್ದಾನೆ .ಶ್ರೀಮಂತರ ಮನೆ ಹುಡುಗ ಅಂತ ಕಾಣತ್ತೆ .ಕೋಟು ,ಗೀಟು ಹಾಕ್ಕೊಂಡು ಕೂತಿದ್ದಾನೆ .ಆದರೆ ತನ್ನಷ್ಟಕ್ಕೆ ತಾನೆ ನಗ್ತಾನೆ ಸ್ವಲ್ಪ ಸಮಯ ತಾನೊಬ್ಬನೇ ಮಾತ್ನಾದಿಕೊಲ್ಲುತ್ತಾನೆ .ಇದ್ದಕ್ಕಿದ್ದ ಹಾಗೆ ಗಂಭೀರವಾಗಿ ಹೋಗ್ತಾನೆ .ಪಾಪ ತಲೆ ಕೆಟ್ಟಿದೆ ಎಂದು ಕಾಣತ್ತೆ .ಮನೆಯವರ ಕಣ್ಣು ತಪ್ಪಿಸಿ ಒಬ್ಬನೇ ಪಾರ್ಕಿಗೆ ಬಂದು ಬಿಟ್ಟಿದ್ದಾನೆ "ಎಂದು ಒಂದೇ ಉಸಿರಿಗೆ ಹೇಳುತ್ತಾ ಅತ್ತ ಕಡೆ ತೋರಿಸಿದಾಗ ನನಗೆ ತಡೆಯಲಾರದಷ್ಟು ನಗು ಬಂತು ."ಅಜ್ಜಿ ಅವನಿಗೆ ಹುಚ್ಚೂ ಇಲ್ಲ ಬೆಪ್ಪೂ ಇಲ್ಲ .ಅವನು ಮೊಬೈಲ್ ಫೋನ್ನಲ್ಲಿ ಮಾತನಾಡ್ತಾ ಇದ್ದಾನೆ.ಕಿವಿಗೆ ಇಯರ್ ಫೋನೇ ಸಿಕ್ಕಿಸಿಕೊಂಡು ಬಿಟ್ಟರೆ ಸಾಕು ,ಗಾಡಿಯ ಮೇಲೆ ಕುಳಿತಿರಲಿರಸ್ತೆಯಲ್ಲಿ ನಡೆಯುತ್ತಿರಲಿ ಆರಾಮವಾಗಿ ಮಾತನಾಡಬಹುದು .ಅಯ್ಯೋ ಅಜ್ಜಿ ನೀನು ಭೂಮಿಯ ಮೇಲೆ ಇದ್ದಾಗ ಫೋನನ್ನೇ ನೋಡಿಲ್ಲ ಬಿಡು .ಈಗ ಸಧ್ಯದಲ್ಲೇ ಎಂಪಿತ್ರಿ ಎಂಬ ತಲೆಗೆ ಕಟ್ಟಿಕೊಳ್ಳುವ ವಾಟರ್ ಪ್ರೂಫ್ ಮೊಬೈಲ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡ್ತಾರಂತೆ .ಇದರಿಂದ ಇನ್ನು ಮುಂದೆ ಸ್ನಾನ ಮಾಡುವಾಗಲು ಮೊಬೈಲ್ ಅನ್ನು ಬಳಸಬಹುದು ಗೊತ್ತಾಯ್ತ "ಎಂದೆ ಪಾಪ ಬಡಪಾಯಿ ಅಜ್ಜಿಗೆ ಏನೂ ಅರ್ಥವಾಗಲಿಲ್ಲ . ಅಷ್ಟೊತ್ತಿಗೆ ಗಂಟೆ ಆಗಿತ್ತು .ಅಜ್ಜಿಗೆ ಬೆಂಗಳೂರಿನ ಬಿಗೆದ್ ರೋಡ್ . ಎಂ ಜಿ ರೋಡ್ ಗಳನ್ನೂ ತೋರಿಸಬೇಕೆನಿಸಿ ಕರೆದೊಯ್ದೆ .ನಮ್ಮಜ್ಜಿಗೆ ಬಹಳ ದಿನಗಳ ಮೇಲೆ ಭೂಲೋಕವನ್ನು ನೋದುತಿದ್ದೆನಲ್ಲ ಎಂದು ಸಂಭ್ರಮವೋ ಸಂಭ್ರಮ. ರಸ್ತೆಯಲ್ಲಿ ಅಗತ್ಯಕ್ಕಿಂತ ಹೆಚ್ಚಿನದ್ದಾಗಿ ತುಂಬಿ ತುಳುಕಾಡುತ್ತಿದ್ದ ಜನರು ,ನಾಯಿ ,ದನಗಳು,ವೆಹಿಕಲ್ ಗಳು ಇವುಗಳಿಂದ ನಮ್ಮ ಭೂತಜ್ಜಿಗೆನು ತೊಂದರೆ ಆಗಲಿಲ್ಲ .ಏಕೆಂದರೆ ಅವರು ನನ್ನೋಬ್ಬಲಿಗೆ ಬಿಟ್ಟು ಮತ್ತಿನ್ಯಾರಿಗೂ ಕಾಣುತ್ತಲೇ ಇರಲಿಲ್ಲ ಆದರೆ ನಡೆಯಲು ತೊಂದರೆ ಆಗುತ್ತಿದ್ದುದ್ದು ದೇಹವಿದ್ದ ನನಗೆ ಅಷ್ಟೆ ಅಷ್ಟರಲ್ಲೇ ನಮ್ಮ ಅಜ್ಜಿಯ ಕಣ್ಣು ಅಲ್ಲೇ ತುಳುಕಿ ,ಬಳುಕಿ ,ಕುಲುಕಿ ನಡೆಯುತ್ತಾ ಎಡ ಹೆಗಲಿನ ಮೇಲೆ ಮೋಟು ವ್ಯಾನಿಟಿ ಬ್ಯಾಗು ನೇತು ಹಾಕಿ ,ಬಲಗೈಯಲ್ಲಿ ಕೆನ್ಚಾದ ತಲೆ ಕೂದಲು ನೇವರಿಸುತ್ತ , ಮೊಬೈಲಿನಲ್ಲಿ ಸ್ಟೈಲ್ ಆಗಿ ಇಂಗ್ಲಿಷು ಮಾತನಾಡುತ್ತ ,ಮೊಣಕಾಲಿನ ಮೇಲೆ ಮೋಟು ಲಂಗ ಧರಿಸಿ ನಡೆಯುತ್ತಿದ್ದ ಲಳನಾಮನಿಯರ ಕಡೆಗೆ ಹರಿದು "ಮಗು ಅಲ್ಲಿ ನೋಡು ಹುಡುಗಿಯರೆಲ್ಲ ಬಿಗಿಯಾದ ,ಮೈಗಂಟಿದ ಬಟ್ಟೆಗಳನ್ನು ತೊಟ್ಟು ದೇಹದ ಉಬ್ಬು ತಗ್ಗುಗಳನ್ನು ತೋರುವ ಮಟ್ಟಕ್ಕೆ ಇಳಿದಿದ್ದಾರೆ ನಿಮ್ಮ ಊರಿನ ಜನರಿಗೆ ಬಟ್ಟೆಗೆ ಬರ ಬಂದಿದೆಯ ?"ಎಂದು ಮುಗ್ಧವಾಗಿ ಕೇಳಿದರು ." ಅಯ್ಯೋ ಇದು ಫ್ಯಾಶನ್ ಪರಮಾವಧಿ ಅಜ್ಜಿ !ಅವರೆಲ್ಲ , sಹ್ರೀಮಂತರ ಮಕ್ಕಳು .ಅವರಿಗೆ ಬಟ್ಟೆ ಕೊಂಡುಕೊಳ್ಳುವುದಕ್ಕೆ ಯಾವ ಸಮಸ್ಯೆನೂ ಇಲ್ಲ "ಎಂದೆ . ತಕ್ಷಣವೇ ಭೂತಜ್ಜಿ ಮತ್ತೊಬ್ಬರನ್ನು ತೋರಿಸಿ "ನೋಡು ಅಲ್ಲಿ ಬರುತ್ತಿರುವ ಹುಡುಗಿಯ ತಲೆಗೂದಲು ಸ್ವಲ್ಪ ಬಿಳುಪು ಸ್ವಲ್ಪ ಕೆನ್ಚಾಗಿ ಎಣ್ಣೆ ಕಾಣದ ಹಾಗಿದೆ . ಒಳ್ಳೆಯ ಆಹಾರ ತಿನ್ನೋದಿಲ್ಲ ಅಂತ ಕಾಣತ್ತೆ .ಬಾಲನೆರೆ ಬಂದಿರಬೇಕು .ಇದಕ್ಕೆ ಕರಿಬೇವಿನಸೊಪ್ಪು ,ಹೊನಗೊನೆ ಸೊಪ್ಪು ಇವುಗಳನ್ನು ತಿನ್ನಬೇಕು .ಆಗ ಖನಿಜಾಂಶ , ಕಬ್ಬಿಣಾಂಶ ಹೆಚ್ಚಾಗಿ ಕೂದಲು ಕಪ್ಪಾಗತ್ತೆ. ನೀನು ಹೀಗೆ ನಿನ್ನ ಕೂದಲನ್ನು ಹಾಳು ಮಾಡ್ಕೋಬೇಡ ಇವನ್ನೆಲ್ಲಾ ಚೆನ್ನಾಗಿ ತಿನ್ನು" ಎಂದಾಗ

"ಅಯ್ಯೋ ಅಜ್ಜಿ ಅವರಿಗೆ ಯಾವ ವಿಟಮಿನ್ ಗಳ ಕೊರತೇನು ಇಲ್ಲ. ರೀತಿ ಬ್ಯೂಟಿ ಪಾರ್ಲರ್ ಗೆ ಹೋಗಿ ಅವರೇಮಾಡಿಸಿಕೊಂಡು ಬರ್ತಾರೆ. ಇದನ್ನು ಹೇರ್ ಕಲರಿಂಗ್ ಅಂತಾರೆ" ಎಂದೆ. "ಅಬ್ಬಾ ಇದೇನು ಕಾಲವಪ್ಪ. ಚೆನ್ನಾಗಿರೋದನ್ನು ನಾವೇ ದುಡ್ಡು ಕೊಟ್ಟು ಕೆಡಸಿಕೊಂಡು ಬರುವುದಾ?" ಎಂದು ಅಜ್ಜಿ ಗೊನಗತ್ತಿದರು

ನನಗೂ ಆ ಸಮಯದಲ್ಲಿ ರಸಿಕ ಕವಿವರ್ಯರ ನೆನಪಾಯ್ತು, ಸುಂದರವಾದ ಕಪ್ಪು ಕೇಶರಾಶಿಯನ್ನು ನೋಡಿ ಆಕರ್ಷಿತರಾಗಿ ನೀಲ (ಕಪ್ಪು) ವೇಣಿ, ನಿಳಕೆಷಿ ಎಂದೆಲ್ಲ ವರ್ಣಿಸಿ ಬರೆದ ಕಾವ್ಯ, ಕೃತಿ ಗಳೆಲ್ಲ ಔಟ್ ಡೇಟೆಡ್ ಆಗಿ ಹೋಯ್ತಲ್ಲ .ಇನ್ನು ಮುಂದೆ ಈ ಹೇರ್ ಕಲರಿಂಗ್ ಚಳುವೆಯರನ್ನು ನೋಡಿ ಬಿಳಿ ವೇಣಿ ,ಕೆಂಚು ವೇಣಿ ಎಂದೆಲ್ಲ ವರ್ನಿಸಬೇಕಾಗುತ್ತದಲ್ಲ ಎಂದು ಚಿಂತೆಯಾಯ್ತು .

ತಲೆಗೂದಲು ಬಿಳುಪಾಗಿದೆಯೇ ,ಬಾಲನೆರೆಯೇ ,ಬೋಕ್ಕತಲೆಯೇ ತಕ್ಷಣವೇ ಸಂಪರ್ಕಿಸಿ ಎಂಬ ಜಾಹೀರಾತುಗಳನ್ನೂ ನೀಡುತ್ತಾ ಸಂಪಾದನೆ ಮಾಡುತ್ತಿದ್ದ ಕಂಪನಿ ಗಳ ಭವಿಷ್ಯ ಮುಂದೆ ಏನಪ್ಪಾ ?ಎಂದು ಆತಂಕವಾಯಿತು .

ಅಂತೂ ಇಂತೂ ಒಂದು ದಿನದಲ್ಲೇ ಅಜ್ಜಿಗೆ ಇಡೀ ಊರಿನ ದರ್ಶನ ಮಾಡಿ ಬದಲಾದ ಊರು ,ಜನರನ್ನು ನೋಡಿ ಗಾಬರಿಯಾಗಿದ್ದರು .ವಯಸ್ಸಾಗುತ್ತಿದ್ದಂತೆ ಉಂಟಾಗುವ ಸುಕ್ಕನ್ನು ಹೋಗಿಸಲು "ಫೇಸ್ ಲಿಫ್ಟಿಂಗ್ ",ತಮ್ಮ ಸುಂದರವಾದ ನೀಳ ಕೆಶರಾಶಿಗೆ ಕತ್ತರಿ ಹಾಕಿ ಮೊಂಡು ಮಾಡಿಸಿ ತಾವೇ ದುಡ್ಡು ತೆತ್ತು ಕಪ್ಪು ಕೇಶವನ್ನು ಕೆಂಚು ,ಬಿಳಿ ಮಾಡಿಸುವ ಹೇರ್ 'ಕಲರಿಂಗ್',ನೆಟ್ಟಗಿರುವ ದಂತಗಳನ್ನು ಫ್ಯಾಷನ್ ಹೆಸರಿನಲ್ಲಿ ವಕ್ರವಾಗಿಸುವ 'ಟೂತ್ ಫಿಟ್ಟಿಂಗ್ ',ದೇಹದ ತುಂಬೆಲ್ಲ ಹಚ್ಹ್ಚೆಹಾಕಿಸಿಕೊಳ್ಳುವ 'ಟ್ಯಾಟೂ ಪೆಸ್ತಿಂಗ್, ಮೂಗುಗಲಿಗೆನೋ ಸರಿ ಆದರೆ ನಾಲಿಗೆ ,ತುಟಿ ,ಹುಬ್ಬು ,ಹೊಕ್ಕಳಿಗೆಲ್ಲ ಓಲೆಗಳನ್ನು ಚಿಚ್ಚಿಸಿಕೊಂಡು ಸಂಭ್ರಮಿಸುವ 'ಆರ್ನಮೆಂಟ್ ಪ್ರಿಕ್ಕಿಂಗ್ ', ಕೋಮಲವಾದ ಕಪ್ಪು ಮೋಹಕ ಕಂಗಳಿಗೆ ಬೆಕ್ಕು ,ನಾಯಿಗಳ ಕನ್ನಿನತಹ ಕಲರ್ ಕಲರ್ 'ಲೆನ್ಸ್ ಗಳ ಫಿಕ್ಸಿಂಗ್',ದಷ್ಟ ಪುಷ್ಟ ವಾದ ದೇಹಕ್ಕೆ ಸೌಂದರ್ಯದ ಹೆಸರಿನಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿಯೇ ಕಸರತ್ತು ಕೊಟ್ಟು ,ಪೌಷ್ಟಿಕ ಆಹಾರವೂ ಇಲ್ಲದೆ ಒಣಗಿದ ಲತೆಯಂತೆ ಮಾಡುವ 'ಫುಡ್ ದಯೇತಿಂಗ್ ',೨೪ ಗಂಟೆಯೂ ಹೆಂಡ ಕುಡಿದ ಮಂಗನಂತೆ ಒಂದೆಡೆ ನಿಲ್ಲದೆ ಕೂರದೆ ಸದಾ ಕಂಪ್ಯೂಟರ್ನಲ್ಲಿ 'ಈ ಮೇಲ್ ಚೆಕ್ಕಿಂಗ್ ','ಮೊಬೈಲಿನಲ್ಲಿ ಚಾಟಿಂಗ್ ',ಅಡುಗೆ ಮಾಡಲೂ ಸಮಯವಿಲ್ಲದೆ ಅಥವಾ ಮನಸಿಲ್ಲದೇ ಹೋಟೆಲ್ಗಳಲ್ಲಿ ,ಬೀದಿಯ ಮೊಬೈಲ್ ಕ್ಯಾಂಟೀನ್ ಗಳಲ್ಲಿ 'ಈಟಿಂಗ್ 'ಮನೆಗೂ ಅದನ್ನೇ 'ಪ್ಯಾಕಿಂಗ್ 'ಈ ರೀತಿಯ ಸೊ ಕಾಲ್ಡ್ ಸೊಸೈಟಿಯ ಫಾಸ್ಟ್ ಮೂವಿಂಗ್ ,ರನ್ನಿಂಗ್ಗಳನ್ನೂ ದಾರಿಯುದ್ದಕ್ಕೂ ನೋಡಿ ಕಣ್ಣರಳಿಸಿ ,ನಿಬ್ಬೆರಗಾದ ನಮ್ಮ ಭೂತಜ್ಜಿಯ ಸಂಕಟ ಮಾತ್ರ ಹೇಳತೀರದು .
"ಅಜ್ಜಿ ವಯಸ್ಸು ಏರುತ್ತಿದ್ದಂತೆ ದೇಹಕ್ಕೋ ರಿಪೆರಿಗಳು ,ಸೌಂದರ್ಯ ಚಿಕಿತ್ಸೆಗಳು ಹೆಚ್ಚಾಗುತ್ತವೆ .ಹುಣಸೆ ಮರಕ್ಕೆ ಮುಪ್ಪು ಬಂದರೇನು ?ಹುಳಿ ಕಡಿಮೆ ಯಾದೀತೆ ?ಎನ್ನುವ ಹಾಗೆ ಇತ್ತೀಚಿಗೆ ವಿದೇಶದಲ್ಲಿ ವಯಸ್ಸಾದ ಮುದುಕ ಮುದುಕಿಯರಿಗೂ ಫ್ಯಾಷನ್ ಪ್ರಪಂಚದ ಗಂಧ ಬಡಿದು ಅವರಿಗೂ ಸೌಂದರ್ಯ ಸ್ಪರ್ಧೆ ಏರ್ಪಾಡಾಗಿದೆಯಂತೆ .ಅಜ್ಜೀ ನೀನು ಸುಂದರವಾಗಿಯೇ ಇದ್ದೀಯ ಆದರೆ ನೀನು ನನ್ನ ಕಣ್ಣಿಗೆ ಕಾಣುವಂತೆ ಎಲ್ಲರಿಗೂ ಕಾನುವನ್ತಿದ್ದರೆ ನೀನು ಇದಕ್ಕೆ ಪ್ರಯತ್ನಿಸಬಹುದಿತ್ತಲ್ಲವೇ .ಚ್ಚೇ!ಎಂತಹ ಗ್ರೇಟ್ ಮಿಸ್ "ಎಂದು ಸುಮ್ಮನೆ ಚೇಡಿಸಿದಾಗ ಸ್ವಲ್ಪ ನಾಚಿಕೆ ಮತ್ತು ಸ್ವಲ್ಪ ಕೋಪದಿಂದ ಬೇಡಪ್ಪ ಬೇಡ ಕಾಲ ಕೆಟ್ಟುಹೋಗಿದೆ ಸೌಂದರ್ಯ ಸ್ಪರ್ಧೆನೂ ಬೇಡ ,ಹೀಗೆ ಗರಬಡಿದವರ ರೀತಿಯಲ್ಲಿ ವರ್ತಿಸುವುದೂ ಬೇಡ .ಈ ಸುಂದರ ಲೋಕದಲ್ಲಿ ಎಲ್ಲವೂ ಡೊಂಕೆ !ನಾನು ಈ ಭೂಲೋಕಕ್ಕೆ ಬಂದಿದ್ದೆ ತಪ್ಪಾಯಿತು .ಸಾಕಮ್ಮ ಸಾಕು ,ನಾನು ಎಲ್ಲಿಂದ ಬಂದೆನೋ ಅಲ್ಲಿಗೆ ಹೋಗ್ತೀನಿ ಎಂದು ಟಾಟ ಮಾಡಿ ಮಾಯವಾಗಿಯೇ ಬಿಟ್ಟರು .ಅಜ್ಜೀ ಅಜ್ಜೀ ನಿಲ್ಲು .ಒಂದೇ ದಿನಕ್ಕೆ ಈ ಆಧುನಿಕ ಲೋಕ ಬೇಜಾರಾಗಿ ಹೋಯ್ತಾ ?ಹೋಗದಿರು ಎಂದು ಕಿರುಚುತ್ತ ,ಅರಚುತ್ತ ಓದಲು ಪ್ರಯತ್ನಿಸುತ್ತಿದ್ದಂತೆ ಇದ್ದಕ್ಕಿದ್ದಂತೆ ಮೇಲಿನಿಂದ ಬಿದ್ದಂತಾಯಿತು .ಸೊಂಟ ಮುರಿಯಿತು .ಅಮಾ ಎಂದು ಅರಚಿದೆ .ಕಣ್ಣು ಬಿಟ್ಟು ನೋಡಿದೆ . ಮನೆಯವರೆಲ್ಲ ನನ್ನ ಕೋಣೆಯಲ್ಲಿ ಬಂದು ನಿತಿದ್ದರು .ನಂತರ ತಿಳಿಯಿತು ಅದು ಕನಸು .

No comments:

Post a Comment