Sunday, March 8, 2009

ರಾಧೆಯ ಕರೆ .

ಮುಸ್ಸಂಜೆಯ ತಂಪು ಗಾಳಿ, ಮೋಹಕ ಮುಂಗುರುಳ
ಸುಳಿ ,ಇನಿಯನ ನೆನೆದು ಕೆಂಪಾಗಿದೆ ಗುಳಿ ಬಿದ್ದ ಕೆನ್ನೆ ,
ಕಣ್ತುಂಬ ಎಷ್ಟೊಂದು ಕನಸು ಘಳಿಗೆ ಘಳಿಗೆಯೂ
ಎದೆಯಲ್ಲಿ ಅರಳಿಕೊಳ್ಳುತ್ತಿವೆಬಣ್ಣ ಬಣ್ಣದ ರಂಗವಲ್ಲಿಗಳ ಸೊಗಸು

ರಾಧೆಗೆ ತನ್ನ ನಲ್ಲ ಮತ್ತೆ ಬಂದೆ ಬರುವನೆಂಬ ನಂಬಿಕೆ
ಪ್ರೀತಿ ರಾಗ ಮಂಟಪದಲ್ಲಿ ಆ ದಿನ ಅವ ಕೊಟ್ಟ ಮುಗ್ಧ ನಗು ,
ನೆತ್ತಿ ಸವರಿ ಚುಂಬಿಸಿ ಆಡಿದ ಮಾತುಗಳು ಹುಸಿಯಾಗದಿರಲೆಂಬ
ಕೋರಿಕೆ ,ತನ್ನ ಪ್ರೀತಿ ಚಿಪ್ಪಿನಲ್ಲೇ ಅವನನ್ನು ಸದಾ ಕೂಡಿಡುವ ಹೆಬ್ಬಯಕೆ .

ಮಾಗಿಯ ತಂಗಾಳಿಯ ಸ್ಪರ್ಶಕ್ಕೆ ಅರೆಕ್ಷಣ ಮನಸೋತು
ಮುರಳಿ ಲೋಲನೆ ಎಂದು ಭಾವಿಸಿ ನಾಚಿ ಮುಖವುಬ್ಬಿಸಿ
ದೇಹ ಮುದುಡಿಸಿ ಮಗದೊಮ್ಮೆ ವಾಸ್ತವಕ್ಕೆ ಮರಳಿ ಅಯ್ಯೋ !
ಭ್ರಮೆಯೆಂದು ನೊಂದು ಸುರಿಸಿದ ಕಣ್ಣೀರ ತುಂಬಾ ಕಹಿ ಸವರಿದ ಸಿಹಿ ಆಸೆಗಳು .

ಬರಲೇ ಇಲ್ಲ ಮೋಹನ ಹದಿನಾರು ಸಾವಿರ ನೀರೆಯರ
ಪೈಕಿ ಹೊಸ ರಂಗಮಂಟಪದಲ್ಲಿ ಇನ್ಯಾರ ಭೇಟಿ ಮಾಡಿ
ಹೊಸ ರಂಗವಲ್ಲಿಗಳ ಬರೆದು ಅವನಿಚ್ಚೆಯ ಬಣ್ಣಗಳ
ತುಮ್ಬಿಸಬೇಕೋ !ಹೊಸ ನಿರೀಕ್ಷೆಗಳ ಹೊತ್ತಿಸಬೇಕೋ !ಪಾಪ
ರಾಧೆ ಮುಗುದೆ ಇವುಗಳ ಅರಿವಿಲ್ಲ ಆಕೆಗೆ ಇನ್ನೂ
ಕಾಯುತಿಹಳು ಕೃಷ್ಣ ಬಂದೆ ಬರುವನೆಂಬ ನಿರೀಕ್ಷೆಯಲ್ಲಿ .

No comments:

Post a Comment