Sunday, March 8, 2009

ಮೌನವೆಷ್ಟು ಸೊಗಸು .

ಮೌನವೆಷ್ಟು ಸೊಗಸು ಕರ್ಣಗಳಿಗೆ ತ್ರಿಶೂಲ
ಚಕ್ರಗಳ ಪ್ರಯೋಗವಿಲ್ಲ .ಎದೆಗೆ ಬಿಲ್ಲು
ಗದೆಗಳ ವದೆಯಿಲ್ಲ .ಪ್ರೀತಿ ಹೂಗಳು
ತಮ್ಮಷ್ಟಕ್ಕೆ ತಾವು ಒಳಗೊಳಗೇ ಬಿರಿಯುವುವಲ್ಲ !

ಕಂಠ ಶೋಷಣೆ ಯಿಲ್ಲ ,ಏನಾಡಬೇಕೆಂಬ ತಳಮಳವಿಲ್ಲ
ಕಣ್ಣಲ್ಲಿ ಕಣ್ಣಿಟ್ಟು ಹೃದಯ ಮೀಟುವ
ಸಮಗಾನಕ್ಕೆ ತಾಳಹಾಕುತ್ತ ನಿಷ್ಕಳಂಕ
ಮಂದಹಾಸ ಬೀರಬಹುದಲ್ಲ !

ಕೊಳದಲ್ಲಿ ಕಮಲ ದಿವಾಕರನಿಗೆ ,
ಕೆನ್ನೈದಿಲೆ ಚಂದ್ರಮನಿಗೆ ನಾಚಿ ಅರಳುವಾಗ
ಯಾವ ಮಾತಿದೆ?ಮೌನದಿ ಹೊಮ್ಮಿದ ಕಿರಣಂ ಗಳಿಗೆ
ಚಿಮ್ಮುವುದಲ್ಲ ಚೈತನ್ಯ !

ಹೃದಯಗಳ ಮಾತು ಆರಂಭವಾದಾಗ
ನಾಲಿಗೆಯು ಮೌನವಾಗಿ ಭಾವಗಳು ಕಂಗಳಲಿ
ಸುಮ್ಮನೆ ತೇಲಿ ಹೋಗುವುವು ತೇಲುತ್ತಾ ,
ತೇಲುತ್ತಾ ,ತೇಲುತ್ತಾ ಮನಗಳು ಒಂದಾಗುವುವು !

No comments:

Post a Comment