Wednesday, March 25, 2009

ಅಬಲೆಯರಲ್ಲ ನಾವು !

ಗಾಢ ಸಂಪ್ರದಾಯದೊಡಲೊಳು

ಮಥಿಸಿ ಬಂದ

ತಾರತಮ್ಯದಾಲಾಹಲವ ಮೆಟ್ಟಿ

ಜಯರಥವನೆರಿದ ವೀರವನಿತೆಯರು ನಾವು ಅಬಲೆಯರಲ್ಲ


ಅಂಧಃಕಾರದ ಕಾಲಗರ್ಭದಲಿ ಕ್ಷೀಣ ಸ್ವರದಲ್ಲಿ

ಅರಣ್ಯ ರೋಧನವ ತಡೆದು ಜೀತ ವ್ರುಕ್ಶವ ಬುಡ

ಮೇಲು ಮಾಡಿ ಆಶಾವಾದದ

ಕಾದಿಮ್ಬನಿಯ ಅಪೇಕ್ಷಿಸುವ ನಾವು ಅಬಲೆಯರಲ್ಲ


ಉಚ್ವಾಸ ನಿಶ್ವಾಸಗಳಲ್ಲಿ ಸ್ಥೈರ್ಯವ ತುಂಬಿ

ಹೃದಯದಲ್ಲಿ ಆತ್ಮಗೌರವ ಹೊಂದಿ ವದನದ ಮೇಲಿನ

ಪರದೆ ತೆರೆದು ಮುಕ್ತ ಜಗದ

ಆಶಾ ಕಿರಣವ ನೋಡುವ ನಾವು ಅಬಲೆಯರಲ್ಲ


ನವವರ್ಷದ ಸದ್ಭಾವನೆಯ ಬೆಳಕೆ ನಿರ್ಭಾವಿಯಾಗದೆ

ದಾರಿ ತೋರು ಸ್ವಾತಂತ್ಯ್ರ ಸಮಾನತೆಯ ಕಹಳೆಯ

ಮೊಳಗಿಸಿ ಆತ್ಮಬಲವ

ವ್ರುಧಿಸಿ ಹೂನ್ಕರಿಸು ನಾವು ಅಬಲೆಯರಲ್ಲವೆಂದು

No comments:

Post a Comment