
ಪ್ರೀತಿಯೇ ನೀ ಗುಪ್ತಗಾಮಿನಿ
ಹೃದಯಗಳ ನಡುವೆ ಹರಿಯುವ ಮೋದಿನಿ
ಮೃದು ನಳಿನಿ ಅಂತರಂಗದ ಸುಹಾಸಿನಿ
ಕರುಣೆಯೇ ನೀ ಪ್ರೀತಿ ಸ್ನೇಹಗಳ ಹುಟ್ಟಿನ ಕಾಮಿನಿ
ದಯೆ ಮರುಕಗಳ ಮಾಲಿನಿ ,ಶಾಲಿನಿ ,ಮೋಹಿನಿ
ಶಾಂತಿ ಮನಮೋಹಿನಿ
ಸ್ನೇಹವೇ ನೀ ಜೀವ ಸಂವೇದನೆಯ
ಅಮೃತವಾಹಿನಿ ತ್ಯಾಗ ಪ್ರೀತಿಯ ಪರಿಪಾಲಿನಿ
ಅನುರಾಗ ಆನಂದ ಸಂವರ್ಧಿನಿ
ಶಾಂತಿಯೇ ನೀ ಸ್ವಾರ್ಥ ಅಹಂಕಾರಗಳ ಸಂಹಾರಿಣಿ
ಸಜ್ಜನಿ ಹೃದಯ ಪೋಷಿನಿ ವಿಲಾಸಿನಿ
ನೀ ವಿಶ್ವ ಕುಟುಮ್ಬಿನಿ.
ದಿವ್ಯ ಮೇಡಮ್,
ReplyDeleteನಿಮ್ಮ ಪ್ರೀತಿಯ ಬಗೆಗಿನ ಕವನ ಚೆನ್ನಾಗಿದೆ...ಮತ್ತೆ ನಿಮ್ಮ ಬ್ಲಾಗ್ ವಿನ್ಯಾಸ ಚೆನ್ನಾಗಿದೆ. good keep it up...
ನಾನು ನಿಮ್ಮ ಬ್ಲಾಗನ್ನು ಹಿಂಬಾಲಿಸುತ್ತಿದ್ದೇನೆ...ಅದಕ್ಕಾಗಿ ಲಿಂಕಿಸಿಕೊಂಡಿದ್ದೇನೆ...ನೀವು ಬಿಡುವಾದಾಗ ನನ್ನ ಬ್ಲಾಗಿಗೆ ಬೇಟಿಕೊಡಿ....
ಅಂದಹಾಗೆ ಈಗಾ ತಾನೆ ನನ್ನ ಬ್ಲಾಗಿನಲ್ಲಿ ಹೊಸ ಟೋಪಿಗಳು ಬಂದಿವೆ...ನೋಡಿ ನಿಮಗಿಷ್ಟವಾದರೆ ನಾಲ್ಕು ಮಾತು ಕಾಮೆಂಟಿಸಿ..
ಧನ್ಯವಾದಗಳು....
ಪ್ರಾಸಕ್ಕೇ ಜಾಸ್ತಿ ಒತ್ತುಕೊಟ್ಟಂತಿದೆ.
ReplyDeleteನಿಮಗೆ ಪದಶಕ್ತಿ ಇದೆ. ಪ್ರತಿಮೆ, ರೂಪಕಗಳ ಬಲದಿಂದ ಸಶಕ್ತ ಕವಿತೆಗಳನ್ನೂ ರಚಿಸಬಹುದು.
ಉತ್ತಮ ಪ್ರಯತ್ನ.