Saturday, March 28, 2009

ಮಮತೆಯ ಮಡಿಲು


ನೂರಾರು ಕನಸುಗಳ ಒಂದುಗೂಡಿಸಿದ

ಬಟ್ಟಲೊಳು ಪ್ರೀತಿಯ ಕಲೆಸಿ

ಉತ್ಸಾಹದಿ ಕಂದನ ಬಾಯ್ಗಿತ್ತು

ತನ್ನ ಹಸಿವ ಮರೆವ ಜನ್ಮದಾತೆಯಿವಳು



ಹೊಕ್ಕಳ ಬಳ್ಳಿಯಲಿ ಅಡಗಿದ್ದ ಜೀವಕ್ಕೆ

ರಕ್ತ ಮಾಂಸದ ಪಾಲು ನೀಡಿ ಸಡಗರದಿ

ಹೆತ್ತು ರಾಜೋಪಚಾರದಿ ಕಂದನ ಬಾಳ

ಬಂಗಾರವಾಗಿಸುವ ಪ್ರಾಣದಾತೆಯಿವಳು



ಪ್ರೀತಿ ವಾತ್ಸಲ್ಯಡಿ ಉಕ್ಕುವ ಅಮೃತವ ಎದೆಯಿಂದ

ಹರಿಸಿ, ಮಮತೆಯ ಮಡಿಲೋಳು ಪ್ರೀತಿಯ ಭೋರ್ಗರೆಸಿ

ತಾನು ಹಡೆದ ಹಸುಗೂಸೆ ತನ್ನ ವಿಶ್ವವೆಂದು

ಭಾವ ತಂಮ್ಯದ ನಿಸ್ವಾರ್ಥದಿ ಸಂಭ್ರಮಿಸುವ

ಜೀವ ಚೈತನ್ಯದ ಪೂರ್ಣ ಬಿಮ್ಬವಿವಳು



ಮೈತುಂಬಿ ಬೆಳೆದ ಮಗುವ ಕಣ್ ತುಂಬಿಸಿ ,ಮೊಂಡಾಟ,

ರಂಪ ಆಟಗಳ ಸೈರಿಸಿ, ಮನ್ನಿಸಿ ,ಕೆಲವೊಮ್ಮೆ ಶಿಸ್ತಿನಲಿ

ಮಗದೊಮ್ಮೆ ಪ್ರೀತಯಾಯಲಿ ದಂಡಿಸಿ ,ಉದಾರ ಹೃದಯದಿ

ಮಾಗಿಸಿ ,ಬಾಗಿಸಿ ,ಸವಿಯಾದ ಹಾಲ್ಗೆನ್ನೆಗೆ ಚುಂಬಿಸಿ ಅಪ್ಪುಗೆಯಲಿ

ಕಂದಮ್ಮನ ನೋವ ಮರೆಸಿ ವಾತ್ಸಲ್ಯದಿ ರಾಜಿಯಾಗಿ

ನವ ಜೀವನಪಥವ ತೋರುವ ಪ್ರೇಮಮಯಿ ಇವಳು


2 comments:

  1. ಚೆನ್ನಾಗಿದೆ...ನಿಮ್ಮ ಲೇಖನಗಳು...

    ಕೇಲವು ಸಾಲುಗಳು ಮನಸ್ಸಿಗೆ ತುಂಬಾನೆ ಹಿಡಿಸಿದವು....

    (i found u from swarna's orkut account....sorry...)

    http://nannakannahani.blogspot.com/

    regards,
    Guru

    ReplyDelete
  2. idu mamathe matra nanna kannalli niru rharstu astu chennagide

    ReplyDelete